Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣವನ್ನು ಕಾಂಗ್ರೆಸ್, ಆರ್‌ಜೆಡಿ ತಡೆದಿತ್ತು: ವಿಪಕ್ಷಗಳ ಮೇಲೆ ಅಮಿತ್‌ ಶಾ ವಾಗ್ದಾಳಿ

Amith Shah

Sampriya

ಬಿಹಾರ , ಬುಧವಾರ, 10 ಏಪ್ರಿಲ್ 2024 (18:56 IST)
Photo Courtesy Facebook
ಬಿಹಾರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ತುಷ್ಟೀಕರಣದ ರಾಜಕಾರಣ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.

ಬಿಹಾರದ ಗಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, 75 ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಆರ್‌ಜೆಡಿ ರಾಮ ಮಂದಿರ ನಿರ್ಮಾಣಕ್ಕೆ ತಡೆ ಒಡ್ಡಿದ್ದವು. ನೀವು ಮೋದಿಯವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ್ದೀರಿ. ಅವರು ಕೇವಲ ಪ್ರಕರಣವನ್ನು ಗೆದ್ದುಕೊಂಡಿಲ್ಲ, ಭೂಮಿಪೂಜೆ ನೆರವೇರಿಸಿದರು ಮತ್ತು ಜನವರಿ 22 ರಂದು ದೇವಾಲಯದಲ್ಲಿ ರಾಮಲಲ್ಲಾವನ್ನು ಪ್ರತಿಷ್ಠಾಪಿಸಿದರು ಎಂದು ಹೇಳಿದರು.

"ಅವರು (ಕಾಂಗ್ರೆಸ್ ಮತ್ತು ಆರ್‌ಜೆಡಿ) ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವುದನ್ನು ಪ್ರತಿಭಟಿಸುತ್ತಿದ್ದಾರೆ" ಎಂದು ಬಿಹಾರದ ಗಯಾದಲ್ಲಿ ನಡೆದ ರ್ಯಾಲಿಯಲ್ಲಿ ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ನೀವು ಎಷ್ಟು ಬಾರಿ ರಾಷ್ಟ್ರವನ್ನು ಒಡೆಯುತ್ತೀರಿ? ನೀವು 1947 ರಲ್ಲಿ ದೇಶವನ್ನು ವಿಭಜಿಸಿದ್ದೀರಿ ಆದರೆ ಈಗ ಮೋದಿ ಜಿ ದೇಶವನ್ನು ಆಳುತ್ತಿದ್ದಾರೆ. ಭಾರತವನ್ನು ಒಡೆಯಲು ನಾವು ಯಾರಿಗೂ ಬಿಡುವುದಿಲ್ಲ ಎಂದು ಶಾ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟರೊಂದಿಗಿರಲು ಸಾಧ್ಯವಾಗುತ್ತಿಲ್ಲ: ಆಪ್ ಪಕ್ಷಕ್ಕೆ, ಸಚಿವ ಸ್ಥಾನಕ್ಕೆ ರಾಜ್ ಕುಮಾರ್ ಆನಂದ್ ರಾಜೀನಾಮೆ