Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ: ನಾಳೆ ಪಾಲಕ್ಕಾಡ್‌ಗೆ ಪ್ರಧಾನಿ ಮೋದಿ

Narendra Modi

Sampriya

ಕೇರಳ , ಸೋಮವಾರ, 18 ಮಾರ್ಚ್ 2024 (17:50 IST)
Photo Courtesy X
ಕೇರಳ: ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 19 (ಮಂಗಳವಾರ) ಬೆಳಿಗ್ಗೆ ಕೇರಳದ ಪಾಲಕ್ಕಾಡ್ ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ.
 
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಪಾಲಕ್ಕಾಡ್ ಕ್ಷೇತ್ರದ ಅಭ್ಯರ್ಥಿ ಸಿ.ಕೃಷ್ಣಕುಮಾರ್ ಅವರು ತೆರೆದ ವಾಹನದಲ್ಲಿ ಮೋದಿಯೊಂದಿಗೆ ರೋಡ್‌ ಶೋ ನಡೆಸಲಿದ್ದಾರೆ.
 
ಬೆಳಗ್ಗೆ 10.10ಕ್ಕೆ ಹೆಲಿಕಾಪ್ಟರ್ ಮೂಲಕ ಮರ್ಸಿ ಕಾಲೇಜ್ ಮೈದಾನಕ್ಕೆ ಆಗಮಿಸಲಿರುವ ಪ್ರಧಾನ ಮೋದಿ ಅವರು ಅಂಜುವಿಳಕ್ಕು ಜಂಕ್ಷನ್‌ನಿಂದ ರೋಡ್ ಶೋ ಆರಂಭಿಸಿ ಕೋರ್ಟ್ ರಸ್ತೆಯ ಮೂಲಕ ಪ್ರಧಾನ ಅಂಚೆ ಕಚೇರಿಗೆ ತೆರಳಲಿದ್ದಾರೆ. 
 
ಮೋದಿ ಆಗಮನ ಹಿನ್ನಿಲೆ ಬಿಗಿ ಭದ್ರತೆ:
ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದರ ಹೊರತಾಗಿ, ಪಟ್ಟಣದ ಮೇಲೆ ಪೊಲೀಸ್‌ ಕಣ್ಗಾವಲು ಇರಲಿದೆ. 
 
ಮೋದಿ ಭೇಟಿಯ ಹಿನ್ನೆಲೆ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಡ್ರೋನ್‌ಗಳು, ಗಾಳಿಪಟ ಮತ್ತು ಗ್ಯಾಸ್ ಬಲೂನ್‌ಗಳ ಬಳಕೆ ನಿಷೇಧಿಸಲಾಗಿದೆ. 
 
ಪಾಲಕ್ಕಾಡ್ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಸಂಚಾರ ನಿರ್ಬಂಧವಿರುತ್ತದೆ. ಅಂಜುವಿಳಕ್ಕು ಜಂಕ್ಷನ್‌ನಿಂದ ಹೆಡ್ ಪೋಸ್ಟ್ ಆಫೀಸ್‌ವರೆಗೆ ಯಾವುದೇ ವಾಹನಗಳು ಅಥವಾ ವ್ಯಕ್ತಿಗಳನ್ನು ಅನುಮತಿಸಲಾಗುವುದಿಲ್ಲ.
 
ಸಿವಿಲ್ ಸ್ಟೇಷನ್ ರಸ್ತೆಯಿಂದ ಫೋರ್ಟ್ ಮೈದಾನ ಮತ್ತು ಐಎಂಎ ಜಂಕ್ಷನ್‌ಗೆ ವಾಹನಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಆಂಬ್ಯುಲೆನ್ಸ್‌ನಂತಹ ತುರ್ತು ವಾಹನಗಳಿಗೆ ವಿನಾಯಿತಿ ನೀಡಲಾಗುತ್ತದೆ. ಜಿಲ್ಲಾ ಆಸ್ಪತ್ರೆಗೆ ಬರುವ ಆಂಬ್ಯುಲೆನ್ಸ್‌ಗಳು ಐಎಂಎ ಜಂಕ್ಷನ್‌ನಿಂದ ತಿರುವು ಪಡೆದು ಅದರ ಹಿಂದಿನ ಗೇಟ್ ಮೂಲಕ ಆಸ್ಪತ್ರೆಯ ಆವರಣವನ್ನು ಪ್ರವೇಶಿಸಬೇಕು.
 
ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಪೋಷಕರು ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ವ್ಯವಸ್ಥೆಗೊಳಿಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವರಿಷ್ಠರ ಭೇಟಿ ಬಳಿಕ ಸುಮಲತಾ ಅಚ್ಚರಿಯ ಹೇಳಿಕೆ