Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಭಾಷಣದಲ್ಲಿ ಮತ್ತೆ ಅಮಿತಾಭ್ ಬಚ್ಚನ್, ಐಶ್ವರ್ಯಾಗೆ ಟಾಂಗ್

Rahul Gandhi

Krishnaveni K

ನವದೆಹಲಿ , ಗುರುವಾರ, 25 ಏಪ್ರಿಲ್ 2024 (12:24 IST)
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮತ್ತೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ರನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.

ದೆಹಲಿಯಲ್ಲಿ ನಡೆದಿದ್ದ ನ್ಯಾಯ್ ಸಮ್ಮೇಳನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನಾನು ರಾಜಕೀಯದ ಬಗ್ಗೆ ಗಂಭೀರವಾಗಿಲ್ಲ ಎಂದು ಕೆಲವು ಮಾಧ್ಯಮಗಳು ನನ್ನನ್ನು ಟೀಕಿಸುತ್ತವೆ. ಅವರಿಗೆ ನರೇಗಾಕ್ಕಾಗಿ, ಭೂ ಸ್ವಾದೀನಕ್ಕಾಗಿ ಹೋರಾಡುವುದು ಗಂಭೀರವೆಂದು ಅನಿಸುವುದೇ ಇಲ್ಲ. ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋದು ಗಂಭೀರವೇ?’ ಎಂದು ಟಾಂಗ್ ಕೊಟ್ಟಿದ್ದಾರೆ.

ಕೆಲವು ಸಮಯದ ಹಿಂದೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದರು. ಮಾಧ‍್ಯಮಗಳು ಕೇವಲ ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್ ಉದ್ಘಾಟನೆಗೆ ಹೋಗಿದ್ದನ್ನು, ಡ್ಯಾನ್ಸ್ ಮಾಡುವುದನ್ನು ತೋರಿಸುತ್ತಾರೆ. ಕೆಲವು ಗಂಭೀರ ವಿಚಾರಗಳ ಬಗ್ಗೆ ತೋರಿಸುವುದೇ ಇಲ್ಲ’ ಎಂದು ಟೀಕಿಸಿದ್ದರು.

ಅಂದು ರಾಹುಲ್ ಅನಗತ್ಯವಾಗಿ ತಮ್ಮ ಹೆಸರು ಉಲ್ಲೇಖಿಸಿದ್ದಕ್ಕೆ ಅಮಿತಾಭ್ ಬಚ್ಚನ್ ನಿಗೂಢಾರ್ಥದ ಪೋಸ್ಟ್ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದೀಗ ಮತ್ತೆ ಬಚ್ಚನ್ ಹೆಸರು ಎಳೆದುತಂದಿದ್ದಾರೆ. ಇದುವರೆಗೆ ಬಚ್ಚನ್ ಕುಟುಂಬ ತಮ್ಮ ಹೆಸರನ್ನು ರಾಹುಲ್ ಗಾಂಧಿ ಅನಗತ್ಯವಾಗಿ ಎಳೆದುತರುತ್ತಿರುವುದಕ್ಕೆ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನೇಹಾಳ ಹತ್ಯೆಗೆ ಫಯಾಜ್ ವಾರದಿಂದ ಮಾಡಿದ್ದ ಸಂಚು ಒಂದೊಂದೇ ಬಯಲು