Select Your Language

Notifications

webdunia
webdunia
webdunia
webdunia

ಹುಡುಗಿಯರ ಮೇಲೆ ನಿಂಬೆಹಣ್ಣು, ಸೌತೆಕಾಯಿ ಎಸೆದು ಚುಡಾಯಿಸುತ್ತಿದ್ದ ಯುವಕರಿಗೆ ತಕ್ಕ ಶಾಸ್ತಿ ಮಾಡಿದ ಯುವತಿ

ಹುಡುಗಿಯರ  ಮೇಲೆ ನಿಂಬೆಹಣ್ಣು, ಸೌತೆಕಾಯಿ ಎಸೆದು ಚುಡಾಯಿಸುತ್ತಿದ್ದ ಯುವಕರಿಗೆ ತಕ್ಕ ಶಾಸ್ತಿ ಮಾಡಿದ ಯುವತಿ
ಹುಬ್ಬಳ್ಳಿ , ಶನಿವಾರ, 24 ನವೆಂಬರ್ 2018 (07:28 IST)
ಹುಬ್ಬಳ್ಳಿ : ಯುವತಿಯೊಬ್ಬಳು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ ಚುಡಾಯಿಸುತಿದ್ದ ಹುಡುಗನೊಬ್ಬನಿಗೆ ಥಳಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಟ್​ಪಾತ್ ಮೇಲೆ ಹೋಗುತ್ತಿದ್ದ ಯುವತಿಯರಿಗೆ ಖಾನಾವಳಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ನಿಂಬೆಹಣ್ಣು, ಸೌತೆಕಾಯಿ ಎಸೆದು ಚುಡಾಯಿಸುತ್ತಿದ್ದರಂತೆ.


ಇದನ್ನು ಕಂಡು ರೊಚ್ಚಿಗೆದ್ದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ವಾತಿ ಕದಂ ಎಂಬುವರು ಆ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆತ ದಬ್ಬಾಳಿಕೆ ಮಾಡಿದ್ದರಿಂದ  ರೊಚ್ಚಿಗೆದ್ದ ಸ್ವಾತಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್​ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ; ಮೋದಿಗೆ ಪೇಜಾವರ ಶ್ರೀಗಳು ನೀಡಿದ ಸಲಹೆಯೇನು?