Select Your Language

Notifications

webdunia
webdunia
webdunia
webdunia

ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನ!

ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನ!
ಬೆಳಗಾವಿ , ಭಾನುವಾರ, 15 ಜುಲೈ 2018 (17:34 IST)
ಬೆಳಗಾವಿಯಲ್ಲಿ ದೇಶದ  ಅತಿ ಎತ್ತರದ ಧ್ವಜವನ್ನ ಮಾರ್ಚ 12 ರಂದು ಸ್ಥಾಪನೆ ಮಾಡಿದ್ದರು. ಆದರೆ ಎನು ಪ್ರಯೋಜನೆ? ಸ್ಥಾಪನೆ ಮಾಡಿ ಹೋದ ಜನಪ್ರತಿನಿದಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಆದರೆ ರಾಷ್ಟ್ರಧ್ವಜಕ್ಕೆ ಪಾಲಿಕೆ ಅದಿಕಾರಿಗಳು ಅವಮಾನ ಮಾಡಿದ್ದಾರೆ.

ರಾಷ್ಟ್ರಧ್ವಜದ ಸದ್ಯದ ಪರಿಸ್ಥಿತಿ ಹೇಗೆ ಇದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡಿದಾಗ ಅಲ್ಲಿರುವ ಪರಿಸ್ತಿತಿನೆ ಬೇರೆ ಇತ್ತು. ಹೌದು ದೇಶದ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ಬೆಳಗಾವಿಯಲ್ಲಿ‌ ನಡೆದಿದೆ.‌ ಕಳೆದ ಮಾರ್ಚ12 ರಂದು‌ ದೇಶದ ಅತಿ ಎತ್ತರದ ರಾಷ್ಟ್ರಧ್ವಜವನ್ನು ಸುಮಾರು 1 ಕೋಟಿ 62 ಲಕ್ಷ 50 ಸಾವಿರ ವೆಚ್ಚದಲ್ಲಿ ಹಿಂದಿನ ಬೆಳಗಾವಿ ಉತ್ತರ ಭಾಗದ ಶಾಸಕರಾಗಿದ್ದ ಪಿರೋಜ್ ಸೇಠ ಅವರ ಅಧ್ಯಕ್ಷತೆಯಲ್ಲಿ  ನಿರ್ಮಾಣವಾಗಿತ್ತು, ಮಾರ್ಚ 12 ರಂದು ಜಿಲ್ಲಾ ಉಸ್ತುವಾರಿ‌ ಸಚಿವ ರಮೇಶ ಜಾರಕಿಹೋಳಿ ಕೂಡಾ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.

ಆದರೆ ಕಳೆದ ಒಂದು ತಿಂಗಳಿಂದ ಮಳೆ ಗಾಳಿಯಿಂದ ಧ್ವಜಕ್ಕೆ ಧಕ್ಕೆಯಾಗಬಾರದೆಂದು ಕೆಳಗಿಳಸಲಾಗಿತ್ತು, ಧ್ವಜವನ್ನ ಭದ್ರವಾಗಿ ಮಳೆಗೆ ನೆನೆಯದ ಹಾಗೆ ಭದ್ರವಾಗಿಡಬೇಕು. ಆದರೆ ಪಾಲಿಕೆಯ ಅದಿಕಾರಿಗಳ ನಿರ್ಲಕ್ಷದಿಂದ ರಾಷ್ಟ್ರ ಧ್ವಜವನ್ನು ನೆಲದ ಮೆಲೆ, ನೀರು ಹೋಗುವ ಕಾಲುವೆಯಲ್ಲಿ, ಡ್ರಮ್ ನಲ್ಲಿ ಇಟ್ಟಿದ್ದಾರೆ. ಧ್ವಜವನ್ನ ಎಲ್ಲಿ ಬೇಕೆಂದರಲ್ಲಿ ಇಟ್ಟು ಅಪಮಾನ ಮಾಡಿದ್ದರು,  ಬಳಿಕ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರಿಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಳಸಾ ಬಂಡೂರಿ, ಮಹದಾಯಿ: ಸರ್ಕಾರಕ್ಕೆ ರೈತರ ಎಚ್ಚರಿಕೆ