Select Your Language

Notifications

webdunia
webdunia
webdunia
webdunia

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 58 ವರ್ಷದ ವೃದ್ಧ ಅರೆಸ್ಟ್

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 58 ವರ್ಷದ ವೃದ್ಧ ಅರೆಸ್ಟ್
ದಾವಣಗೆರೆ , ಶನಿವಾರ, 1 ಡಿಸೆಂಬರ್ 2018 (07:11 IST)
ದಾವಣಗೆರೆ : ಟ್ಯೂಷನ್ ಗೆಂದು ಬಂದ 8 ವರ್ಷದ ಬಾಲಕಿಯ ಮೇಲೆ 58 ವರ್ಷದ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.


ಈ ವೃದ್ಧ ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಅಜೀಜ್ (58) ಎಂಬುದಾಗಿ ತಿಳಿದುಬಂದಿದೆ. ಈತನ ಮಗ ಮಕ್ಕಳಿಗೆ ಪ್ರತಿನಿತ್ಯ ಟ್ಯೂಷನ್ ಕೊಡುತ್ತಿದ್ದು, ಬಾಲಕಿಯು ಅಲ್ಲಿಗೆ  ಟ್ಯೂಷನ್ ಗೆಂದು ಬಂದಿದ್ದಳು. ಆ ವೇಳೆ ವೃದ್ಧ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.


ಆತನಿಂದ ಹೇಗೋ ತಪ್ಪಿಸಿಕೊಂಡ ಬಾಲಕಿ ಮನೆಗೆ ಹೋಗಿ ಈ ವಿಚಾರವನ್ನು ತನ್ನ ಪೋಷಕರಿಗೆ ಹೇಳಿದ್ದಾಳೆ. ಕೂಡಲೇ ಪೋಷಕರು ಆರೋಪಿ ಅಜೀಜ್ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಜೀಜ್ ನನ್ನು ವಶಕ್ಕೆ ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಕೈದಿಯ ಮೇಲೆ ಇಬ್ಬರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ