Select Your Language

Notifications

webdunia
webdunia
webdunia
webdunia

ಹೆತ್ತ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ

ಹೆತ್ತ ಮಗಳ  ಮೇಲೆಯೇ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ
ಆಂಧ್ರಪ್ರದೇಶ , ಗುರುವಾರ, 29 ನವೆಂಬರ್ 2018 (07:18 IST)
ಆಂಧ್ರಪ್ರದೇಶ : ಹೆತ್ತ ಮಗಳ  ಮೇಲೆಯೇ ನಿರಂತರ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿಯಲ್ಲಿ ನಡೆದಿದೆ.


ತಂದೆಯೊಬ್ಬ ಕುಡಿದ ಮತ್ತಿನಲ್ಲಿ ಹೆತ್ತ ಮಗಳ ಮೇಲೆ ಕೆಲ ತಿಂಗಳುಗಳ ಕಾಲ  ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಬಾಲಕಿ ಯಾರಿಗೂ ತಿಳಿಸದ ಕಾರಣ ಈ ವಿಚಾರ  ಕುಟಂಬಸ್ಥರಿಗೂ ಗೊತ್ತಾಗಿರಲಿಲ್ಲ.  


ಆದರೆ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆ ಬಾಲಕಿ ಶಾಲೆಗೆ ತೆರಳಿದಾಗ ತಲೆ ಸುತ್ತು ಬಂದು ಬಿದ್ದ ಕಾರಣ ತಕ್ಷಣ ಮುಖ್ಯೋಪಾಧ್ಯಾಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಆರು ತಿಂಗಳು ಗರ್ಭಿಣಿ ಆಗಿರುವ ವಿಚಾರ ಬೆಳಕಿಗೆ ಬಂದಿದೆ.


ಈ ಸುದ್ದಿ ತಿಳಿದ ತಕ್ಷಣ  ಹೆಡ್​ ಮಾಸ್ಟರ್​, ಸಂಸ್ಥೆಯೊಂದರ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೊಪಿ ತಂದೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯರಿಗೆ ಪಾಠ ಮಾಡುವ ನೆಪದಲ್ಲಿ ಮುಖ್ಯ ಶಿಕ್ಷಕ ಮಾಡುತ್ತಿದ್ದೇನು ಗೊತ್ತಾ?