ತಾಕತ್ ಇದ್ದರೆ ಶಾಸಕರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ ಎಂದು ಕಾಂಗ್ರೆಸ್, ಜೆಡಿಎಸ್ ಗೆ ಸವಾಲೆಸೆದ ಶ್ರೀರಾಮುಲು

ಬುಧವಾರ, 5 ಡಿಸೆಂಬರ್ 2018 (20:22 IST)
ಆಪರೇಷನ್ ಕಮಲ ವಿಚಾರ ಈಗ ಅಪ್ರಸ್ತುತವಾಗಿದೆ. ಪದೇ ಪದೇ ಯಾಕೆ ಇದನ್ನ ಇಟ್ಟುಕೊಂಡಿದ್ದಿರೋ ಅರ್ಥ ಆಗ್ತಾ ಇಲ್ಲ. ನಾವು ಏನು ಮಾಡಿದ್ದೇವೆ? ಅದು ಯಾವಾಗೋ ಒಂದು ಸಮಯದಲ್ಲಿ ಅಪರೇಷನ್ ಕಮಲ ಮಾಡಿದ್ದೇವೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿದ್ದು, ಮೈತ್ರಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದು, ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳು ನಮ್ಮ ಪಾರ್ಟಿಯ ಎಂಎಲ್ ಎ ಗಳನ್ನೇ ಅಪರೇಷನ್ ಮಾಡಲು ಹೊರಟಿದ್ದಾರೆ ಎಂದು ಹೊಸ ಬಾಂಬ್ ಹಾಕಿದ್ದಾರೆ ಬಿ.ಶ್ರೀರಾಮುಲು.

ಸುಳ್ಳು ಸುದ್ದಿ ಸೃಷ್ಟಿ ಮಾಡುವುದು ಮೈತ್ರಿ ಸರ್ಕಾರಕ್ಕೆ ಹೊಸ ಪ್ಯಾಷನ್ ಆಗಿದೆ. ಆ ಹೊಸ ಪ್ಯಾಷನ್ ನಲ್ಲಿ ಸಿಕ್ಕಿಕೊಳ್ಳಲು ನಾವು ರೆಡಿ ಇಲ್ಲ. ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲ. ಬೇರೆಯವರನ್ನ ಭಯ ಬೀಳಿಸಲು ಈ ರೀತಿ ಸೃಷ್ಠಿ ಮಾಡುತ್ತಿದ್ದಾರೆ.
ಅವರು ಶಾಸಕರನ್ನ ತಾಕತ್ ಇದ್ದರೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ ಎಂದು ಸವಾಲು ಎಸೆದರು.

ಬರದ ಬಗ್ಗೆ ಗಮನ ನೀಡದೇ,  ಅಪರೇಷನ್ ಕಮಲ ಅಂತ ಜನರನ್ನ ಇಕ್ಕಟ್ಡಿಗೆ ಸಿಲುಕಿಸಿ  ಅನುಕಂಪ ಬರುವಂತೆ ಮಾಡುತ್ತಿದ್ದಾರೆ. ಜನರನ್ನ ತಪ್ಪು ದಾರಿಗೆ ಎಳೆದುಕೊಂಡು ಹೋಗಿ ಮಸಿ ಬಳಿಯುವ ಕೆಲಸ ಬಿಡಿ ಎಂದು ಹೇಳಿದರು.  ‘ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಅಂತಾರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿದ್ದೆಲ್ಲಿಗೆ ಗೊತ್ತಾ?