Select Your Language

Notifications

webdunia
webdunia
webdunia
webdunia

ಕಾಡಿನಿಂದ‌ ನಾಡಿಗೆ ಬಂದ ನಾಗರ ಹಾವು ಮನೆಯೊಂದಕ್ಕೆ‌‌ ಎಂಟ್ರಿ

ಕಾಡಿನಿಂದ‌ ನಾಡಿಗೆ ಬಂದ ನಾಗರ ಹಾವು ಮನೆಯೊಂದಕ್ಕೆ‌‌ ಎಂಟ್ರಿ
ಚಿಕ್ಕಮಗಳೂರು , ಭಾನುವಾರ, 1 ಏಪ್ರಿಲ್ 2018 (14:38 IST)
ಆಹಾರ ಹುಡುಕುತ್ತಾ ಕಾಡಿನಿಂದ‌ ನಾಡಿಗೆ ಬಂದ ನಾಗರ ಹಾವು ಮನೆಯೊಂದಕ್ಕೆ‌‌ ಎಂಟ್ರಿ ಕೊಟ್ಟಿದೆ. ಒಂದು ಕೋಳಿಯನ್ನ ಸಾಯಿಸಿ, ನಾಲ್ಕು ಕೋಳಿ ಮೊಟ್ಟೆಯನ್ನ ನುಂಗಿ  ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನೊಂದಿಗೆ ನರಳಾಟ ಅನುಭವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‌ ಸಮೀಪದ ಚೇಗು  ಗ್ರಾಮದಲ್ಲಿ ನಡೆದಿದೆ. 
ಗ್ರಾಮದ ಹರೀಶ್ ಎಂಬುವರ ಮನೆಗೆ  ಎಂಟ್ರಿ ನೀಡಿದ ನಾಗರಾಜ  ಕೋಳಿಯನ್ನು ಸಾಯಿಸಿ ನಾಲ್ಕು ಮೊಟ್ಟೆಯನ್ನ ನುಂಗಿದೆ. ತನ್ನ ಗಂಟಲಿನಲ್ಲಿ ನಾಲ್ಕು‌‌ ಮೊಟ್ಟೆಗಳು ಸಿಕ್ಕಿ‌ಹಾಕಿಕೊಂಡು ಅಡುಗೆ ಮನೆಯಲ್ಲಿ ಬಿದ್ದು ಹೊರಳಾಟ ನಡೆಸುತ್ತಿತ್ತು.    
 
ಹಾವಿನ ನರಳಾಟ ಕಂಡು ಹರೀಶ್ ಮನೆಯವರು  ಭಯಗೊಂಡಿದ್ರು. ಉರುಗ ತಜ್ಞ ಆರೀಫ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನ  ಹಿಡಿದು ಚಿಕಿತ್ಸೆ ನೀಡಿದ್ದಾರೆ.
 
ನಾಗರ ಹಾವಿನ ಹೊಟ್ಟೆಯಲ್ಲಿದ್ದ  ನಾಲ್ಕು  ಮೊಟ್ಟೆಯನ್ನೂ ಹೊರಹಾಕಿದೆ. ಇದನ್ನ ಕಂಡ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ನಾಗರ ಹಾವನ್ನ ರಕ್ಷಣೆ ಮಾಡಿ‌ದ ಆರೀಫ್, ಹಾವನ್ನು ಚಾರ್ಮಾಡಿ ಘಾಟ್‌‌ನಲ್ಲಿ ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದ ಪೂಜಾರಿಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ