Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಶ್ರೀ ಅನಾರೋಗ್ಯದ ನಡುವೆ ಶುಭ ಕೋರಿದ್ದು ನೋಡಿದ್ರೆ ದಂಗಾಗ್ತೀರಾ…!

ಸಿದ್ದಗಂಗಾ ಶ್ರೀ ಅನಾರೋಗ್ಯದ ನಡುವೆ ಶುಭ ಕೋರಿದ್ದು ನೋಡಿದ್ರೆ ದಂಗಾಗ್ತೀರಾ…!
ತುಮಕೂರು , ಸೋಮವಾರ, 24 ಡಿಸೆಂಬರ್ 2018 (17:04 IST)
ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶ್ರೀ ಗಳ ಆರೋಗ್ಯದ ಚೇತರಿಕೆ ಕಂಡು ವೈದ್ಯ ಲೋಕವೇ ಬೆರಗಾಗಿದೆ. ಅನಾರೋಗ್ಯದ ನಡುವೆಯೂ ಶ್ರೀಗಳು ಶುಭ ಹಾರೈಸಿ ವಿಡಿಯೋ ಬಿಡುಗಡೆಗೊಳಿಸಿದ್ದು, ಭಕ್ತರಲ್ಲಿ, ವಿದ್ಯಾರ್ಥಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ವಿಶ್ರಾಂತಿಯಲ್ಲಿರುವ ಸಿದ್ದಗಂಗಾ ಶ್ರೀಗಳ‌ ದರ್ಶನ ಭಾಗ್ಯವಿಲ್ಲದೆ ಭಕ್ತರು ಚಡಪಡಿಸುತ್ತಿದ್ದಾರೆ. ಆದರೆ ಮಠದಲ್ಲಿ ಏರ್ಪಡಿಸಿದ್ದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ 64 ನೇ ಮಹಾಧಿವೇಶನ ಪ್ರಶಸ್ತಿ ಸಮಾರಂಭದಲ್ಲಿ ಶ್ರೀಗಳ ಗೈರು ಹಾಜರಿ ಎದ್ದುಕಾಣುತಿತ್ತು. ಕಾರ್ಯಕ್ರಮದಲ್ಲಿ ಉತ್ಸಾಹವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿವರ್ಷ ಶ್ರೀಗಳ ಸಾನಿಧ್ಯದಲ್ಲೆ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸ್ವಾಮೀಜಿ ವಿಡಿಯೋ ಕಳುಹಿಸಿದ್ದರು. ಇದನ್ನ ಕಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹ ಭಾವುಕರಾದರು. ಶ್ರೀಗಳ‌ ಆರ್ಶೀವಚನ ಭಕ್ತರ ಮನಸ್ಸಿಗೆ ನೆಮ್ಮದಿ ತಂದಿತು.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಮಠಕ್ಕೆ ಡಿಸಿಎಂ ಭೇಟಿ