Select Your Language

Notifications

webdunia
webdunia
webdunia
webdunia

ಕಾರು ಚಾಲಕ ಕಾರ್ತಿಕ್ ಭೇಟಿಯಾಗಿಲ್ಲ ಎಂದ ಬೆನ್ನಲ್ಲೇ ಶ್ರೇಯಸ್ ಪಟೇಲ್ ಜತೆಗಿನ ಫೋಟೋ ವೈರಲ್

Karthik

Sampriya

ಹಾಸನ , ಬುಧವಾರ, 8 ಮೇ 2024 (14:53 IST)
Photo Courtesy X
ಹಾಸನ: ಪೆನ್‌ಡ್ರೈವ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್  ಪಟೇಲ್ ಅವರು ಕಾರ್ತಿಕ್‌ ಸೇರಿದಂತೆ ಯಾರನ್ನೂ ಭೇಟಿಯಾಗಿಲ್ಲ ಎಂದು ಸ್ಪಷ್ಟಣೆ ನೀಡಿದ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಣಾಲದಲ್ಲಿ ಕಾರ್ತಿಕ್ ಹಾಗೂ ಶ್ರೇಯಸ್ ಪಟೇಲ್ ಅವರನ್ನು ಭೇಟಿಯಾಗಿರುವ ಫೋಟೋಗಳು ವೈರಲ್ ಆಗಿದೆ.

ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರು , ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಅವರ ಮೂಲಕ ಕಾರ್ತಿಕ್‌ ಪೆನ್‌ಡ್ರೈವ್‌ ಅನ್ನು ಕಾಂಗ್ರೆಸ್‌ ಮುಖಂಡರಿಗೆ ಕೊಟ್ಟಿರಬಹುದು’ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಸ್ ಪಟೇಲ್ ಅವರು ’ನಾನು, ಕಾರ್ತಿಕ್‌ ಸೇರಿದಂತೆ ಯಾರನ್ನೂ ಭೇಟಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರೊಂದಿಗೆ ಕಾರ್ತಿಕ್‌ ಕೈಕೈ ಹಿಡಿದುಕೊಂಡಿರುವ   ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲ ದಿನಗಳ ಹಿಂದೆ ಕಾರ್ತಿಕ್, ಪುಟ್ಟಿ ಅಲಿಯಾಸ್ ಪುಟ್ಟರಾಜು ಅವರು ಶ್ರೇಯಸ್ ಪಟೇಲ್ ಅವರನ್ನು ಹೊಳೆನರಸೀಪುರದ ಅವರ ನಿವಾಸದಲ್ಲೇ ಭೇಟಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರೇವಣ್ಣನಿಗಾಗಿ ಮಾತ್ರ ಹೋರಾಟ ಮಾಡ್ತೀನಿ, ಪ್ರಜ್ವಲ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ