Select Your Language

Notifications

webdunia
webdunia
webdunia
webdunia

ಮತ್ತೊಂದು ‌‌‌ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಮತ್ತೊಂದು ‌‌‌ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

Sampriya

ವಿಜಯಪುರ , ಮಂಗಳವಾರ, 7 ಮೇ 2024 (17:23 IST)
Photo Courtesy X
ವಿಜಯಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ದೇಶದಲ್ಲೇ ಚರ್ಚೆಗೆ ಕಾರಣವಾಗಿದ್ದು, ಇದೀಗ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು  ಶೀಘ್ರದಲ್ಲೇ ಮತ್ತೊಂದು ಸಿಡಿ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಶೀಘ್ರದಲ್ಲೇ ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ ಎಂದು ಹೇಳುವ ಮೂಲಕ ಪಾಟೀಲ್ ಯತ್ನಾಳ್ ಅವರು ಹೊಸ ಬಾಂಬ್ ಸಿಡಿಸಿದರು.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಪ್ರಕರಣವನ್ನು ವೈರಲ್ ಮಾಡುವಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಇನ್ನೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋವಾಗಲಿ, ರೇವಣ್ಣ ಅವರ ಬಂಧನವಾಗಲಿ ಬಿಜೆಪಿಯಾವುದೇ ಪರಿಣಾಮ ಬೀರುವುದಿಲ್ಲ.

ವಕೀಲ ದೇವರಾಜೇಗೌಡ ಅವರು ಹೇಳಿದಂತೆ ಈ ಪ್ರಕರಣದ ಹಿಂದೆ ಕಾಂಗ್ರೆಸ್‌ನ ಮಹಾ ನಾಯಕನಿದ್ದಾನೆ. ಇದನ್ನ ಮಾಡಿದವರ ಯಾರು ಅಂತಾ ಹೇಳಿದ್ದಾರೆ, ಆ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಎಸ್ ಐಟಿ ಸಂಪೂರ್ಣ ಡಿ ಕೆ ಶಿವಕುಮಾರ್ ಏಜೆಂಟ್ ರಾಗಿ ಕೆಲಸ ಮಾಡುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೇ 20ರ ವರೆಗೆ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜೈಲೇ ಗತಿ