Select Your Language

Notifications

webdunia
webdunia
webdunia
webdunia

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ: ಬಾಂಬರ್‌ ಸುಳಿವು ಕೊಟ್ಟವರಿಗೆ ₹10ಲಕ್ಷ ಬಹುಮಾನ

NIA

Sampriya

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (19:32 IST)
ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಎನ್‌ಐಎ ಭರ್ಜರಿ ಬಹುಮಾನ ಘೋಷಣೆ ಮಾಡಿದೆ.

ಇದೀಗ ಶಂಕಿತರ ಫೋಟೋ ಮತ್ತು ಅವರ ವಿವರಗಳನ್ನು ಸ್ಪಷ್ಟವಾಗಿ ಬಿಡುಗಡೆಗೊಳಿಸಿರುವ ಎನ್​ಐಎ, ವಾಟೆಂಡ್ ಲಿಸ್ಟ್​ನಲ್ಲಿರುವವರನ್ನು ಹುಡುಕಿಕೊಟ್ಟವರಿಗೆ ₹10 ಲಕ್ಷ ನಗದು ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದೆ.

ಈಗಾಗಲೇ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ನಿನ್ನೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದರು. ಆರೆಸ್ಟ್ ಆದವನನ್ನು ಮುಜಮ್ಮಿಲ್ ಶರೀಫ್ ಎಂದು ಗುರುತಿಸಲಾಗಿದೆ. ‌ಇದರ ಬೆನ್ನಲ್ಲೇ ಇದೀಗ ಶಂಕಿತರ ಫೋಟೋ ಬಿಡುಗಡೆಗೊಳಿಸಿದ ಎನ್‌ಐಎ, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಭರ್ಜರಿ ನಗದು ಬಹುಮಾನ ಘೋಷಣೆ ಮಾಡಿದೆ.

ಬುಧವಾರ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿದ್ದ ನಂತರ ಪ್ರಮುಖ ಸಂಚುಕೋರನನ್ನು ಎನ್​ಐಎ ತಂಡ ಬಂಧಿಸಿತು. ರಾಜ್ಯದಲ್ಲಿ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲ್ಲ: ಎಸ್‌.ಎಲ್‌.ಬೈರಪ್ಪ ಭವಿಷ್ಯ