Select Your Language

Notifications

webdunia
webdunia
webdunia
webdunia

ಫೋನ್ ಕದ್ದಾಲಿಕೆ: ಬಿಎಸ್ ವೈಗೆ ಹೆಚ್.ಡಿ.ಕೆ ತಿರುಗೇಟು

ಫೋನ್ ಕದ್ದಾಲಿಕೆ: ಬಿಎಸ್ ವೈಗೆ ಹೆಚ್.ಡಿ.ಕೆ ತಿರುಗೇಟು
ರಾಮನಗರ , ಬುಧವಾರ, 29 ಆಗಸ್ಟ್ 2018 (17:18 IST)
ರಾಜ್ಯ ಸರ್ಕಾರದಿಂದ ಪೋನ್ ಕದ್ದಾಲಿಕೆ ನಡೆಯುತ್ತಿದೆ. ನಾನು‌ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಫೋನ್ ಟ್ರ್ಯಾಕಿಂಗ್ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರದ ಕೈಲಾಂಚದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಹೆಚ್.ಡಿ.ಕೆ., ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಯಡಿಯೂರಪ್ಪ ಅವ್ರು ಪ್ರಧಾನಿ ಮೋದಿಯವರನ್ನ ಭೇಟಿ ಮಾಡ್ಲಿ.  ಯಾರದ್ದೂ ಟ್ರಾಪ್ ಆಗುತ್ತಿದೆ ಎಂದು ತನಿಖೆ ನಡೆಸಲು ಅವರಿಗೆ ಅವಕಾಶ ಇದೆಯಲ್ಲಾ ಎಂದು ಪ್ರಶ್ನಿಸಿದ್ರು. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಅವರ ಮಾಡಿದ ಕೆಲಸವನ್ನ ತಲೆಯಲ್ಲಿ ಇಟ್ಟುಕೊಂಡು ಯಡಿಯೂರಪ್ಪ ಹೇಳಿರಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಬೇರೆಯವರ ಪೋನನ್ನ ಕದ್ದಾಲಿಸುವ ಚಟ ನನಗಿಲ್ಲ. ಆ ಹವ್ಯಾಸದಲ್ಲಿ ನಾನು ಬಂದಿಲ್ಲ.
ಈ ಬಗ್ಗೆ ಸಣ್ಣ ಸಾಕ್ಷಿ ತಂದು ಕೊಟ್ಟರು ನಾನೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸ್ಥಳೀಯ ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ, ಸಮ್ಮಿಶ್ರ ಸರ್ಕಾರ ನೂರು ದಿನಗಳನ್ನ ಪೂರೈಸುವುದಲ್ಲದೆ, ಸೆಪ್ಟಂಬರ್ ತಿಂಗಳಲ್ಲಿ ನೂತನ ಯೋಜನೆಗಳನ್ನ ಜಾರಿಗೊಳಿಸಲಾಗುತ್ತದೆ. ರಾಜ್ಯದ ಅಭಿವೃದ್ದಿಗಾಗಿ ಸಮಯ ವ್ಯರ್ಥಮಾಡದೆ ಸರ್ಕಾರ ಕೆಲಸ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು. 






Share this Story:

Follow Webdunia kannada

ಮುಂದಿನ ಸುದ್ದಿ

ಟಿಬೆಟ್ ಅಧ್ಯಕ್ಷ ಲೋಬ್ಸಾಂಗ್ ಶಾಂಘೆ ಭೇಟಿ ನೀಡಿದ್ದು ಎಲ್ಲಿಗೆ ಗೊತ್ತಾ?