Select Your Language

Notifications

webdunia
webdunia
webdunia
webdunia

ನಗರದಲ್ಲಿ ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಪರವಾನಿಗೆ ಕಡ್ಡಾಯ

bbmp

geetha

bangalore , ಭಾನುವಾರ, 28 ಜನವರಿ 2024 (15:43 IST)
ಬೆಂಗಳೂರು-ನಗರದಲ್ಲಿ ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು.ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು (PG) ಕೇಂದ್ರಗಳಿಗೆ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದಾರೆ.ಈ ಬಗ್ಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್ ಗುಪ್ತ ಅವರಿಂದ ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಿಸಿದ್ದಾರೆ.ಪಿಜಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಜಗಳ ಗುರುತಿನ ಚೀಟಿ ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ,ಮೊಬೈಲ್ ನಂಬರ್ ದಾಖಲೆ ಮಾಡಬೇಕು.

ಇನ್ನೂ ಪಿಜೆಗೆ ಭೇಟಿ ನೀಡಲು ಬರುವ ಸಂಬಂಧಿಕರಗಿರಲಿ‌ ಅಥವಾ ಯಾರೇ ಆಗಿರಲಿ ಅವರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು.ಸಿಸಿಟಿವಿ,ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು, ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸ ಬಾರದು.ಇನ್ನೂ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.

ವಾಸಕ್ಕೆ ಇರುವವರನ್ನು ಬಿಟ್ಟು ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು.ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧನ್ನಿವರ್ಧಕ ಬಳಸುವಂತಿಲ್ಲ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.ಇದ್ಯಾವುದು ಮುಂಜಾಗ್ರತೆ ಕ್ರಮ ಕೈ ಗೊಳ್ಳದಿದ್ದರೆ ಪಿಜಿ ಮಾಲೀಕರೆ ಹೊಣೆ ಎಂದು ಸೂಚಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಟಿವಿಯಲ್ಲಿ ಸೆರೆಯಾಗಿದೆ ಪುಂಡನ ಪುಂಡಾಟ