Select Your Language

Notifications

webdunia
webdunia
webdunia
webdunia

ವಿರೋಧದ ನಡುವೆಯೂ ವಿಧಾನಪರಿಷತ್ತಿನ ಸಭಾನಾಯಕರಾಗಿ ನೇಮಕಗೊಂಡ ಸಚಿವೆ ಜಯಮಾಲ

ವಿರೋಧದ ನಡುವೆಯೂ ವಿಧಾನಪರಿಷತ್ತಿನ ಸಭಾನಾಯಕರಾಗಿ ನೇಮಕಗೊಂಡ ಸಚಿವೆ ಜಯಮಾಲ
ಬೆಂಗಳೂರು , ಸೋಮವಾರ, 2 ಜುಲೈ 2018 (15:01 IST)
ಬೆಂಗಳೂರು : ಕನ್ನಡ ಮತ್ತು ಸಂಸ್ಕಂತಿ ಸಚಿವರಾದ ನಟಿ  ಜಯಮಾಲಾ ಅವರು ವಿರೋಧಗಳ ನಡುವೆಯೂ ವಿಧಾನಪರಿಷತ್ತಿನ ಸಭಾನಾಯಕರಾಗಿ ನೇಮಕಗೊಂಡಿದ್ದಾರೆ.


ಮೇಲ್ಮನೆ ಕಲಾಪ ಆರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಜಯಮಾಲಾ ಅವರನ್ನು ವಿಧಾನಪರಿಷತ್‍ನ ಸಭಾನಾಯಕರಾಗಿ ಹಾಗೂ ವಿಪಕ್ಷದ ಸಚೇತಕರಾಗಿ ಮಹಂತೇಶ ಕವಟಗಿ ಮಠ್ ಅವರ ನೇಮಕವನ್ನು ಪ್ರಕಟಿಸಿದರು.


ವಿಧಾನಪರಿಷತ್ತಿಗೆ ಹಿರಿಯ ಸದಸ್ಯರನ್ನು ಸಭಾನಾಯಕರನ್ನಾಗಿ ನೇಮಕ ಮಾಡಬೇಕೆಂದು ಹಲವು ಕಾಂಗ್ರೆಸ್‍ನ ಹಿರಿಯ ಸದಸ್ಯರು ಪಕ್ಷದ ಅಧ್ಯಕ್ಷರಿಗೆ, ಸಮನ್ವಯ ಸಮಿತಿ ಅಧ್ಯಕ್ಷರಿಗೆ ಹಾಗೂ ಪಕ್ಷದ ಉಸ್ತುವಾರಿಗೆ ಮನವಿ ಮಾಡಿದರು. ಈ ಎಲ್ಲಾ ಆಕ್ಷೇಪಗಳ ನಡುವೆಯೇ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ಸದಸ್ಯರಾಗಿರುವ ಜಯಮಾಲಾ ಅವರನ್ನು ಸಭಾನಾಯಕರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ ನಟ ನಿಖಿಲ್ ಕುಮಾರಸ್ವಾಮಿ