Select Your Language

Notifications

webdunia
webdunia
webdunia
webdunia

ಭಾರಿ ಮಳೆಗೆ ಭರ್ತಿಯಾದ ಹಿಡಕಲ್ ಜಲಾಶಯ

ಭಾರಿ ಮಳೆಗೆ ಭರ್ತಿಯಾದ ಹಿಡಕಲ್ ಜಲಾಶಯ
ಬೆಳಗಾವಿ , ಶುಕ್ರವಾರ, 3 ಆಗಸ್ಟ್ 2018 (16:47 IST)
ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಘಟಪ್ರಭಾ ಜಲಾನಯನ ಪ್ರದೇಶ ಹಾಗೂ ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿದ್ದು, ರಾಜ್ಯದ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಘಟಪ್ರಭಾ ಜಲಾನಯನ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಬಹುತೇಕವಾಗಿ ಹಿಡಕಲ್ ಜಲಾಶಯ ಭರ್ತಿಯಾಗಿದೆ. ನಾಲ್ಕು ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಡ್ಯಾಮ್ ಜನರನ್ನು ಆಕರ್ಷಿಸುತ್ತಿದೆ. ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಆಗಷ್ಟ ಮೊದಲ ವಾರದಲ್ಲಿ ಭರ್ತಿಯಾಗಿ ದಾಖಲೆ ನಿರ್ಮಿಸಿದೆ.

ಹಿಡಕಲ್ ಜಲಾಶಯದ ಗರಿಷ್ಠ ಮಟ್ಟ  2,175 ಅಡಿಗಳಿದ್ದು, ಅಗಷ್ಟ್ 3ಕ್ಕೆ ಜಲಾಶಯ ಮಟ್ಟ 2,172.13 ಅಡಿ ತಲುಪಿದೆ. 5ನೇ ತಾರೀಖಿನವರೆಗೆ ಸಂಪೂರ್ಣ ಭರ್ತಿಯಾಗಿ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದೆ.

ಜಲಾಶಯದ ಒಟ್ಟು ನೀರಿನ ಸಂಗ್ರಹ 48.98 ಟಿಎಂಸ ಆಗಿದ್ದು, ಈಗಾಗಲೇ ಜಲಾಶಯದಲ್ಲಿ 46.97 TMC ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ 29.16 TMC ನೀರಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಮಾನವೀಯತೆ ಮೆರೆದ ಕುರಿಗಾಹಿಗಳು