Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದ ಸಂಭಾಜಿರಾವ್ ಬಿಡೆ ಗೂರುಜಿಗೆ ಕರ್ನಾಟಕ ಪ್ರವೇಶ ನಿರ್ಬಂಧ

ಮಹಾರಾಷ್ಟ್ರದ ಸಂಭಾಜಿರಾವ್ ಬಿಡೆ ಗೂರುಜಿಗೆ ಕರ್ನಾಟಕ ಪ್ರವೇಶ ನಿರ್ಬಂಧ
ಬೆಳಗಾವಿ , ಗುರುವಾರ, 19 ಜುಲೈ 2018 (15:06 IST)
ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಬಿಡೆ ಗೂರುಜಿಗೆ ಮತ್ತೆ ಕರ್ನಾಟಕ ಪ್ರವೇಶ ನಿರ್ಬಂಧ ಹೇರಲಾಗಿದೆ. ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧವನ್ನು ಬೆಳಗಾವಿ ಜಿಲ್ಲಾಧಿಕಾರಿ ವಿಧಿಸಿದ್ದಾರೆ. ಬೆಳಗಾವಿ ಡಿಸಿ ಜಿಯಾವುಲ್ಲಾ ಅವರಿಂದ ನಿರ್ಬಂಧ ವಿಧಿಸಿ ಆದೇಶ ಹೊರಬಿದ್ದಿದೆ.

ಇದೇ ತಿಂಗಳು 21 ಮಧ್ಯರಾತ್ರಿ 12 ಗಂಟೆಯಿಂದ 11 ದಿನಗಳ ಕಾಲ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜುಲೈ 31 ಮಧ್ಯಾಹ್ನ 12 ಗಂಟೆಯ ವರೆಗೂ ಮಹಾ ಮುಖಂಡ ಸಂಭಾಜಿರಾವ್ ಗೆ ನಿರ್ಬಂಧ ವಿಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಆಗಮಿಸಲಿದ್ದ  ಸಂಭಾಜಿರಾವ್ ಬಿಡೆ.

ಸಂಕೇಶ್ವರದ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು  ಸಂಭಾಜಿರಾವ್ ಗೆ ಆಹ್ವಾನಿಸಿದ್ದರು. ಈ ಕಾರ್ಯಕ್ರಮದಲ್ಲಿ ದಿ ಹಿಸ್ಟರಿ ಆಫ್ ರಾಯಘಡ ಸುವರ್ಣ ಸಿಂಹಾಸನ ವಿಷಯ ಕುರಿತು ಭಾಷಣ ಮಾಡಲಿದ್ದ ಸಂಭಾಜಿರಾವ್ ಬಿಡೆ.

ಆದರೆ ಮಹಾರಾಷ್ಟ್ರದಲ್ಲಿ ಭೀಮಾಕೋರೆಗಾಂವ ಗಲಭೆಗೆ ಬಿಡೆ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು. ಹೀಗಾಗಿ ಸಂಭಾಜಿರಾವ್ ಪ್ರಚೋದನಕಾರಿ ಭಾಷಣದಿಂದ ಸಮಾಜದ ಶಾಂತಿ ಕದಡಬಾರದು ಮತ್ತು ಯಾವುದೇ ಜನಾಂಗದ ಭಾವನೆಗೆ ಧಕ್ಕೆ ಆಗಬಾರದೆಂದು ಮುಂಜಾಗೃತ ಕ್ರಮವಾಗಿ ಬೆಳಗಾವಿ ಜಿಲ್ಲೆ ಪ್ರವೇಶ ನಿಷೇಧಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್- ಯಾವುದು ಸತ್ಯ..? ಶಿರೂರು ಶ್ರೀಗಳ ಸಾವಿನ‌ ಸುತ್ತ!