Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೈಗಳ ಕಸಿ ಮಾಡಿದ್ದೆಲ್ಲಿ ಗೊತ್ತಾ?

ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೈಗಳ ಕಸಿ ಮಾಡಿದ್ದೆಲ್ಲಿ ಗೊತ್ತಾ?
ಆನೇಕಲ್ , ಸೋಮವಾರ, 19 ನವೆಂಬರ್ 2018 (16:28 IST)
ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಯಶಸ್ವಿಯಾಗಿ ಕೈಗಳ ಕಸಿ ಮಾಡಲಾಗಿದೆ.

ಹೃದಯ, ಕಿಡ್ನಿ, ಲಿವರ್ ಕಸಿ ಜೊತೆ ಕೈಗಳನ್ನು ಕಸಿ ಮಾಡಲು ಮುಂದಾದ ವೈದ್ಯರು ಗಮನ ಸೆಳೆದಿದ್ದಾರೆ. ಪಾಂಡಿಚೇರಿ ಜಿಪ್ಮರ್ ಹಾಸ್ಪಿಟಲ್ ವೈದ್ಯರಿಂದ ಕೈಗಳ ಕಸಿ ನಡೆದಿದೆ. ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದ ರೋಗಿಗೆ ಕೈಗಳ ಕಸಿ ಮಾಡಲಾಗಿದೆ.

ಕೃಷ್ಣಗಿರಿ ಮೂಲದ ವಿಕಾಸ್ ಕುಮಾರ್(22) ಎಂಬುವವರಿಂದ ಅಂಗಾಗ ದಾನ ಪಡೆಯಲಾಗಿತ್ತು. ಇದೇ ತಿಂಗಳು 15 ರಂದು ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ವಿಕಾಸ್ ಕುಮಾರ್ ಗೆ ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯವಾಗಿತ್ತು. ಈ ಬಗ್ಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಘೋಷಣೆ ಮಾಡಿದ ಬಳಿಕ ಪೋಷಕರು ಅಂಗಾಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.

ಮಧ್ಯ ಪ್ರದೇಶದ ಅಂಜಲ್ ಶುಕ್ಲಾ (15) ಎಂಬುವವರಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಹೃದಯ ಜೋಡಣೆ
ಲೀವರ್ ಮತ್ತು ಒಂದು ಕಿಡ್ನಿ ಇಬ್ಬರು ರೋಗಿಗಳಿಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ಜೋಡಣೆ ಮಾಡಲಿದ್ದಾರೆ.  
ಒಂದು ಕಿಡ್ನಿ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ನ ರೋಗಿಗೆ ಜೋಡಣೆ ಮಾಡಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಬಾಹಿರ ತುಂಬಿದ ಮರಳು: ಸಿಎಂಗೆ ತಾಕತ್ತಿದ್ರೆ ನನ್ನ ವಿರುದ್ಧ ಕೇಸ್ ಹಾಕಲಿ ಎಂದ ಶಾಸಕ