Select Your Language

Notifications

webdunia
webdunia
webdunia
webdunia

‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಪ್ರಾಣಿಬಲಿಕೊಟ್ಟ ಅಭಿಮಾನಿಗಳ ವಿರುದ್ಧ ದೂರು ದಾಖಲು

‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಪ್ರಾಣಿಬಲಿಕೊಟ್ಟ ಅಭಿಮಾನಿಗಳ ವಿರುದ್ಧ ದೂರು ದಾಖಲು
ಮಂಗಳೂರು , ಬುಧವಾರ, 24 ಅಕ್ಟೋಬರ್ 2018 (10:19 IST)
ಮಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರು ನಟಿಸಿದ ‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಅಭಿಮಾನಿಗಳು ಪ್ರಾಣಿಬಲಿ ನೀಡಿದ ಘಟನೆ ನಡೆದಿದೆ. ಈ ಬಗ್ಗೆ ಇದೀಗ  ಅಭಿಮಾನಿಗಳ ವಿರುದ್ಧ ದೂರು ದಾಖಲಾಗಿದೆ.


ಹೌದು. ‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಅಭಿಮಾನಿಗಳು ಸಾರ್ವಜನಿಕವಾಗಿ  ಕೋಣವನ್ನು ಬಲಿ ಕೊಟ್ಟಿದ್ದಲ್ಲದೆ, ಅದಕ್ಕೆ ಸಂಬಂದಪಟ್ಟ  ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜಯಪ್ರಕಾಶ್ ಎಕ್ಕೂರು ಎಂಬುವವರು ಬಲಿ ಕೊಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರಿಗೆ ದೂರು ನೀಡಿದ್ದಾರೆ.


ಪ್ರಾಣಿಗಳನ್ನು ಈ ರೀತಿಯಾಗಿ ವಧೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಆದ್ದರಿಂದ ಕೂಡಲೇ ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು  ದೂರಿನಲ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಜನಾ ಮೀಟೂ ಆರೋಪಕ್ಕೆ ದಾಖಲೆ ಸಮೇತ ಮಾಹಿತಿ ನೀಡಿದ ಗೀತ ರಚನೆಕಾರ ನಾಗೇಂದ್ರ ಪ್ರಸಾದ್