Select Your Language

Notifications

webdunia
webdunia
webdunia
webdunia

ಕ್ಯಾಶ್ ಬ್ಯಾಕ್ ಆಫರ್ ಅಪಾಯ

ಕ್ಯಾಶ್ ಬ್ಯಾಕ್ ಆಫರ್ ಅಪಾಯ
ಬೆಂಗಳೂರು , ಬುಧವಾರ, 2 ಮಾರ್ಚ್ 2022 (14:52 IST)
ಪೇಟಿಎಂ ಕ್ಯಾಶ್ ಬ್ಯಾಕ್ ಆಫರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಸೈಬರ್ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
 
ದೀಪಕ್ ಚಕ್ರವರ್ತಿ ಬಂಧಿತ ಆರೋಪಿ. ಈತ ತಾನು ಪೇಟಿಎಂ ಎಕ್ಸಿಕ್ಯೂಟೀವ್ ಎಂದು ಪರಿಚಯಿಸಿಕೊಳ್ಳುತ್ತಿದ್ದ.
ಪರಿಚಯವಾದವರಿಗೆ ಕ್ಯಾಶ್ ಬ್ಯಾಕ್ ಆಫರ್‌ಗಾಗಿ ಪೇಟಿಎಂ ಬಿಸಿನೆಸ್ ಆಪ್ ಇನ್‌ಸ್ಟಾಲ್ ಮಾಡಿಸುತ್ತಿದ್ದ. ಆ ಬಳಿಕ 20 ಸಾವಿರ ರೂ. ಠೇವಣಿ ಇಡುವಂತೆ ಸೂಚಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ಅನೇಕ ಮಂದಿಗೆ ಈ ರೀತಿ ಮೋಸ ಮಾಡಿದ್ದ. ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ದೂರುಗಳು ದಾಖಲಾಗಿದ್ದವು. ಆರೋಪಿ ಚಲನವಲನ ಗಮನಿಸಿ ದೀಪಕ್ ಚಕ್ರವರ್ತಿಯನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅನೇಕರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
 
ಆನ್‌ಲೈನ್ ವಹಿವಾಟು ನಡೆಸುವ ಆಪ್‌ಗಳು ಗ್ರಾಹಕರನ್ನು ಸೆಳೆಯಲು ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿವೆ. ಹೀಗಾಗಿ ಜನರು ಸಣ್ಣ ಅನುಮಾನ ಪಡದೇ ಆಪ್‌ಗಳ ಕ್ಯಾಶ್ ಬ್ಯಾಕ್ ಆಫರ್ ಬಗ್ಗೆ ಸಂಶಯಗಳಿಲ್ಲದೇ ನಂಬುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದೀಪಕ್ ಚಕ್ರವರ್ತಿ ಪೇಟಿಎಂ ಬಿಸಿನೆಸ್ ಆಪ್ ಇನ್‌ಸ್ಟಾಲ್ ಮಾಡಿಸುವ ಹೆಸರಿನಲ್ಲಿ ಅನೇಕರಿಂದ ಹಣ ಪಡೆದು ದೋಖಾ ಮಾಡಿದ್ದಾನೆ. ಆನ್‌ಲೈನ್ ಆಫರ್‌ಗಳ ಹೆಸರಿನಲ್ಲಿ ಸೈಬರ್ ವಂಚಕರು ವಂಚನೆಗೆ ಇಳಿದಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗ ಶ್ರೀಕಾಂತ್ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ