Select Your Language

Notifications

webdunia
webdunia
webdunia
webdunia

97% ರಷ್ಟು ಅಂಕ ತೆಗೆದರು ಮೆಡಿಕಲ್ ಸೀಟ್ ಸಿಗಲಿಲ್ಲ

97% ರಷ್ಟು ಅಂಕ ತೆಗೆದರು ಮೆಡಿಕಲ್ ಸೀಟ್ ಸಿಗಲಿಲ್ಲ
ಬೆಂಗಳೂರು , ಬುಧವಾರ, 2 ಮಾರ್ಚ್ 2022 (14:09 IST)
ಉಕ್ರೇನ್-ರಷ್ಯಾ ನಡುವಿನ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ರಕ್ಕಸ ದಾಳಿಗೆ ಕರುನಾಡು ಒಬ್ಬ ವಿದ್ಯಾವಂತ ಯುವಕನನ್ನು ಕಳೆದುಕೊಂಡಿದೆ. ಇದು ಯಾರಿದಂಲೂ ಭರಸಲಾಗದ ನಷ್ಟ. ಉಕ್ರೇನ್‌ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಹಾವೇರಿ ಮೂಲದ ನವೀನ್‌ ರಷ್ಯಾ ದಾಳಿಗೆ ಬಲಿಯಾಗಿದ್ದಾನೆ.
ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಕೊನೆ ಮುಖವನ್ನಾದರು ನೋಡಬೇಕು ಎಂದು ಕುಟುಂಬ ಮರುಕ ವ್ಯಕ್ತಪಡಿಸುತ್ತಿದೆ. ಸರ್ಕಾರಕ್ಕೆ ಪರಿ ಪರಿಯಾಗಿ ಮನವಿ ಮಾಡಿಕೊಳ್ಳುತ್ತಿದೆ. ಈ ವೇಳೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಸರಿ ಇದ್ದಿದ್ದರೆ ನಮ್ಮ ಮಕ್ಕಳು ನಮ್ಮ ಕಣ್ಣು ಮುಂದೆ ಇರುತ್ತಿದ್ದರು ಎಂದು ತಂದೆ ನೋವು ತೋಡಿಕೊಂಡಿದ್ದಾರೆ.
 
ನವೀನ್ ಡಾಕ್ಟರ್ ಓದುತ್ತಿದ್ದರು. MBBS ಓದಲು ಅವರು ಉಕ್ರೇನ್‌ಗೆ ತೆರಳಿದ್ದರು. ಭಾರತದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚು ಕೈಗೆಟುಕುವ ಹಣದಲ್ಲಿ ಎಂಬಿಬಿಎಸ್‌ ಮುಗಿಸಬಹುದು. ಹೀಗಾಗಿ ಇದು ಭಾರತೀಯ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಇಲ್ಲಿನ ಖಾಸಗಿ ಕಾಲೇಜುಗಳಲ್ಲಿ ಕಡಿಮೆ ಶುಲ್ಕ ಪಡೆದು ಶಿಕ್ಷಣದ ಗುಣಮಟ್ಟವನ್ನು ಆಧರಿಸಿ ಭಾರತೀಯ ವಿದ್ಯಾರ್ಥಿಗಳನ್ನು ಆಯಕ್‌ಎ ಮಾಡಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ವೈದ್ಯರಾಗುವ ಕನಸು ಕಂಡ ವಿದ್ಯಾರ್ಥಿಗಳು ಉಕ್ರೇನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇಲ್ಲಿ ಹಲವಾರು ಪ್ರಸಿದ್ಧ ವೈದ್ಯಕೀಯ ಶಾಲೆಗಳು ಸೀಟು ಒದಗಿಸಲು ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಸುಮಾರು 90% ಭಾರತೀಯರು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆ ಕಿತ್ತಾಡಿದ್ದಕ್ಕೆ ಸಹೋದರನನ್ನೇ ಕೊಂದ ಯುವಕ