Select Your Language

Notifications

webdunia
webdunia
webdunia
webdunia

ಹಾಡಹಗಲೇ ನಡುರಸ್ತೆಯಲ್ಲಿ ಯುವತಿಗೆ ಕಿರುಕುಳ ನೀಡಿದ ಕಾಮುಕ ಅರೆಸ್ಟ್

ಹಾಡಹಗಲೇ ನಡುರಸ್ತೆಯಲ್ಲಿ ಯುವತಿಗೆ ಕಿರುಕುಳ ನೀಡಿದ ಕಾಮುಕ ಅರೆಸ್ಟ್
ಬೆಂಗಳೂರು , ಮಂಗಳವಾರ, 30 ಅಕ್ಟೋಬರ್ 2018 (08:49 IST)
ಬೆಂಗಳೂರು : ನಡುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಕಾಮುಕನೊಬ್ಬ ಹಾಡಹಗಲೇ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬ್ರಿಗೇಡ್ ರಸ್ತೆಯ ಶೋರೂಂವೊಂದರಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಯುವತಿ ಅಕ್ಟೋಬರ್ 26 ರಂದು ಮಧ್ಯಾಹ್ನ 2.30 ರ ವೇಳೆಗೆ  ಊಟ ಮಾಡಲು ಸಮೀಪದ ಹೋಟೆಲ್ ಗೆ ತೆರಳಿದ್ದರು. ಮೆಗ್ರತ್ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಎದುರಾಗಿದ್ದ ತಮಿಳುನಾಡು ಮೂಲದ ವ್ಯಕ್ತಿ ಆರ್ಮುಗಂ ಎಂಬಾತ ಆಕೆಯ ಮೈ ಮುಟ್ಟಲು ಯತ್ನಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ.


ಈ ಕಾಮುಕನ ವರ್ತನೆಯಿಂದ ಹೆದರಿದ ಯುವತಿ ಅಲ್ಲೇ ಇದ್ದ ಸಂಚಾರಿ ಪೊಲೀಸರ ಬಳಿ ತಿಳಿಸಿದ್ದಾಳೆ. ಕೂಡಲೇ ಕಾಮುಕನನ್ನು ಹಿಡಿದ ಪೊಲೀಸರು ಅಶೋಕನಗರದ ಅಪರಾಧ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಿಯಕರನನ್ನು ಮೆಚ್ಚಿಸಲು ಯುವತಿ ನೀಡಿದ ಗಿಪ್ಟ್ ಏನೆಂದು ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ