Select Your Language

Notifications

webdunia
webdunia
webdunia
webdunia

ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ ವೀಳ್ಯದೆಲೆ ರಸಂ

ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ ವೀಳ್ಯದೆಲೆ ರಸಂ
ಬೆಂಗಳೂರು , ಮಂಗಳವಾರ, 30 ಅಕ್ಟೋಬರ್ 2018 (07:28 IST)
ಬೆಂಗಳೂರು : ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ

ವೀಳ್ಯದೆಲೆ ರಸಂ ತಯಾರಿಸುವ ವಿಧಾನ:
ಒಂದು ಮಿಕ್ಸಿ ಜಾರಿಗೆ 5 ಎಸಳು ಬೆಳ್ಳುಳ್ಳಿ, 10 ಕಾಳುಮೆಣಸು, ಅರ್ಧ ಚಮಚ ಜೀರಿಗೆ, 1 ಒಣಮೆಣಸಿನಕಾಯಿ ಮತ್ತು ಸಣ್ಣಗೆ ಹೆಚ್ಚಿದ 2 ವೀಳ್ಯದೆಲೆಯನ್ನು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.2 ಟೊಮಟೊವನ್ನು ರುಬ್ಬಿಟ್ಟುಕೊಳ್ಳಿ ಹಾಗು ಹುಣಸೆಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ.


 

ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಹುರಿಯಿರಿ ನಂತರ ಅದಕ್ಕೆ ರುಬ್ಬಿದ ಟೊಮಟೊ, ಸ್ವಲ್ಪ ಹುಣಸೇರಸ, ಅಗತ್ಯಕ್ಕೆ ತಕ್ಕಂತೆ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ಈಗ ರುಚಿ ರುಚಿಯಾದ ವೀಳ್ಯದೆಲೆ ರಸಂ ಸವಿಯಲು ಸಿದ್ಧ,

 

ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪದ ಜೊತೆ ಮತ್ತು ಸೂಪ್ ರೀತಿಯಲ್ಲಿ ಕುಡಿಯಲು ತುಂಬಾ ತುಂಬಾ ರುಚಿಯಾಗಿರುತ್ತದೆ. ಇದು ಶೀತ ಕೆಮ್ಮಗೆ ಉತ್ತಮ ಔಷಧಿಯಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಊಟ ಮಾಡಿದ ತಕ್ಷಣ ಮಾಡುವ ಈ ಅಭ್ಯಾಸಗಳನ್ನು ಬಿಟ್ಟುಬಿಡಿ