Select Your Language

Notifications

webdunia
webdunia
webdunia
webdunia

‘ದಿ ವಿಲನ್’ ಚಿತ್ರದಲ್ಲಿ ವಿಲನ್ ಸುದೀಪಾ? ಅಥವಾ ಶಿವರಾಜ್ ಕುಮಾರಾ?

‘ದಿ ವಿಲನ್’ ಚಿತ್ರದಲ್ಲಿ ವಿಲನ್ ಸುದೀಪಾ? ಅಥವಾ ಶಿವರಾಜ್ ಕುಮಾರಾ?
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (07:19 IST)
ಬೆಂಗಳೂರು : ಕನ್ನಡದ ಬಹುನಿರೀಕ್ಷೆಯ  ‘ದಿ ವಿಲನ್’ ಚಿತ್ರದಲ್ಲಿ ವಿಲನ್ ಯಾರು ಎಂಬ ಪ್ರಶ್ನೆಗೆ ಇದೀಗ ನಟ ಶಿವರಾಜ್ ಕುಮಾರ್ ಅವರಿಂದ ಪರೋಕ್ಷವಾಗಿ ಉತ್ತರ ಸಿಕ್ಕಿದೆ.


ಹೌದು. ಜೋಗಿ ಪ್ರೇಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಿ ವಿಲನ್’ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಇವರಿಬ್ಬರಲ್ಲಿ ವಿಲನ್ ಯಾರು ಎಂಬ ಗೊಂದಲ ಹಲವರಲ್ಲಿತ್ತು.


ಆದರೆ ಡಾ. ರಾಜ್‍ಕುಮರ್ ಅವರ ಹುಟ್ಟುಹಬ್ಬದ ದಿನದಂದು ದಿ-ವಿಲನ್ ಸಿನಿಮಾ ಕುರಿತಾಗಿ ಎದುರಾದ ಪ್ರಶ್ನೆಗೆ ನಟ ಶಿವರಾಜ್ ಕುಮಾರ್ ಅವರು,’ ನಾನು ಎಷ್ಟು ದಿನ ಒಳ್ಳೆಯವನಾಗಿರಲಿ. ಆದ್ರೆ ಒಮ್ಮೆಯಾದರು ವಿಲನ್ ಆಗುತ್ತೀನಿ’ ಎಂದು ಉತ್ತರಿಸಿದ್ದು, ದಿ ವಿಲನ್ ಸಿನಿಮಾದಲ್ಲಿ ಇವರೇ ನಿಜವಾದ ವಿಲನಾ? ಎಂಬ ಸಂಶಯ ಅವರ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಇದೆಲ್ಲದಕ್ಕೂ ಸರಿಯಾದ ಉತ್ತರ ಸಿನಿಮಾ ರಿಲೀಸ್ ಆದ ನಂತರ ತಿಳಿಯಲಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ ಜೋಡಿ