Select Your Language

Notifications

webdunia
webdunia
webdunia
webdunia

ಬೆಂಗಳೂರು ಕಂಬಳದಲ್ಲಿ ರಿಷಬ್ ಶೆಟ್ಟಿಗೆ ಟ್ರೈನಿಂಗ್ ಕೊಟ್ಟ ಟ್ರೈನರ್

ಬೆಂಗಳೂರು ಕಂಬಳದಲ್ಲಿ ರಿಷಬ್ ಶೆಟ್ಟಿಗೆ ಟ್ರೈನಿಂಗ್ ಕೊಟ್ಟ ಟ್ರೈನರ್
ಬೆಂಗಳೂರು , ಶನಿವಾರ, 25 ನವೆಂಬರ್ 2023 (09:11 IST)
Photo Courtesy: Twitter
ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಕರಾವಳಿಯ ವೈಭವದ ಕಂಬಳ ಉತ್ಸವದ ಸಂಭ್ರಮ. 180 ಕ್ಕೂ ಹೆಚ್ಚು ಜೋಡಿ ಕೋಣಗಳು ಕಂಬಳ ಗದ್ದೆಯಲ್ಲಿ ಓಟಕ್ಕಿಳಿಯಲಿವೆ.

ಇದಕ್ಕಾಗಿ ಮೊನ್ನೆಯೇ ದ.ಕ. ಜಿಲ್ಲೆಗಳಿಂದ ಪರಿಣಿತ ಕೋಣಗಳು ಮತ್ತು ಅವುಗಳ ಮಾಲಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಂಬಳ ನೋಡುವುದೇ ಒಂದು ವಿಶೇಷ. ಹೀಗಾಗಿ ಕೇವಲ ಕರಾವಳಿಗರು ಮಾತ್ರವಲ್ಲ, ಇಡೀ ಬೆಂಗಳೂರೇ ಇಂದು ಮತ್ತು ನಾಳೆ ಅರಮನೆ ಮೈದಾನದಲ್ಲಿ ಸೇರಲಿದೆ.

ಕಂಬಳ ಎಂದ ತಕ್ಷಣ ಬೆಂಗಳೂರಿಗರಿಗೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎಂಟ್ರಿ ನೆನಪಾಗಬಹುದು. ಕಂಬಳದ ಕೋಣಗಳನ್ನು ಓಡಿಸುತ್ತಾ ರಿಷಬ್ ಎಂಟ್ರಿ ಕೊಡುವ ದೃಶ್ಯ ನೆನಪಾಗುತ್ತದೆ.

ಈ ಸಿನಿಮಾದಲ್ಲಿ ಕಂಬಳ ಓಡಿಸಲು ರಿಷಬ್ ಶೆಟ್ಟಿಗೆ ಟ್ರೈನಿಂಗ್ ಕೊಟ್ಟವರು ಮಹೇಶ್ ಎಂಬವರು. ಅವರು ಈ ಬಾರಿ ಬೆಂಗಳೂರು ಕಂಬಳದಲ್ಲಿ ಬೋಲಾರದ ಕಾಟಿ ಕೋಣವನ್ನು ಓಡಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕಂಬಳ: ಇಂದು, ನಾಳೆ ಬರಲಿರುವ ಸ್ಟಾರ್ ನಟ-ನಟಿಯರು