Select Your Language

Notifications

webdunia
webdunia
webdunia
webdunia

ಹೆಣ್ಣು ಮಗು ದತ್ತು ಪಡೆಯಲು 50 ಸಾವಿರ ಹಣ ಕೊಟ್ಟಿದ್ದ ಸೋನು ಗೌಡ

Sonu Srinivas Gowda

Krishnaveni K

ಬೆಂಗಳೂರು , ಮಂಗಳವಾರ, 26 ಮಾರ್ಚ್ 2024 (15:44 IST)
ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಬಂಧಿತರಾಗಿರುವ ಬಿಗ್ ಬಾಸ್ ಖ್ಯಾತಿಯ ನಟಿ ಸೋನು ಶ್ರೀನಿವಾಸ್ ಗೌಡ ಮಗುವಿನ ಪೋಷಕರಿಗೆ 50 ಸಾವಿರ ರೂ. ನೀಡಿದ್ದರು ಎಂದು ತಿಳಿದುಬಂದಿದೆ.

ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇದೀಗ ತನಿಖಾಧಿಕಾರಿಗಳು ಮಗುವಿನ ಊರಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣ ನೀಡಿದ ವಿಚಾರ ಬೆಳಕಿಗೆ ಬಂದಿದೆ.

ಸೋನು ಗೌಡ 50 ಸಾವಿರ ರೂಪಾಯಿ ನೀಡಿರುವುದು ನಿಜ. ಆದರೆ ಇದುವರೆಗೆ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ನಡೆದಿಲ್ಲ. ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ, ಭವಿಷ್ಯ ಕೊಡಿಸುವುದಾಗಿ ಹೇಳಿದ್ದರಿಂದ ಒಪ್ಪಿ ಕಳುಹಿಸಿಕೊಟ್ಟಿದ್ದೆವು ಎಂದು ಪೋಷಕರು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.

ದತ್ತು ನೀಡುವ ಕಾನೂನು ಪ್ರಕ್ರಿಯೆ ಬಗ್ಗೆ ನಮಗೆ ಗೊತ್ತಿಲ್ಲ. ಒಳ್ಳೆಯ ಭವಿಷ್ಯ ಸಿಗುತ್ತದೆಂದು ಮಗುವನ್ನು ಕಳುಹಿಸಿಕೊಟ್ಟಿದ್ದೆವು. ಆಗಾಗ ನಮಗೆ ಕರೆ ಮಾಡಿ ಮಗುವನ್ನು ಮಾತನಾಡಿಸುತ್ತಿದ್ದರು. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಪೋಷಕರು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ತಾಪ್ಸಿ ಪನ್ನು ಗುಪ್ತ್ ಗುಪ್ತ್ ಮದುವೆ