Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್

Sonu Srinivas Gowda

Krishnaveni K

ಬೆಂಗಳೂರು , ಶುಕ್ರವಾರ, 22 ಮಾರ್ಚ್ 2024 (11:55 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸೋನು ಗೌಡ ಅರೆಸ್ಟ್ ಆಗಿದ್ದೇಕೆ ಎಂಬ ವಿವರ ಇಲ್ಲಿದೆ.

ಕಾನೂನು ಬಾಹಿರವಾಗಿ ಸೋನು ಗೌಡ ಮಗು ದತ್ತು ಪಡೆದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇತ್ತೀಚೆಗೆ 7-8 ವರ್ಷದ ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಹೇಳಿಕೊಂಡಿದ್ದರು. ಅದೇ ಪ್ರಕರಣವೀಗ ಅವರಿಗೆ ಮುಳುವಾಗಿದೆ.

ಕಾನೂನುಬಾಹಿರವಾಗಿ ದತ್ತು ಪಡೆದಿದ್ದಾರೆ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಾರ್ಟ್ ಬಳಿ ನಾಯಿಗೆ ಬಿಸ್ಕತ್ ಹಾಕಲು ಹೋದಾಗ ಈ ಮಗುವನ್ನು ನೋಡಿದ್ದೆ. ಅವಳಿಗೆ ಚಾಕಲೇಟ್ ಕೊಡಿಸಿದೆ. ನಂತರ ಶಾಪಿಂಗ್ ಗೆ ಹೋದೆವು. ನಂತರ ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿದೆ. ನಾನು ದತ್ತು ತೆಗೆದುಕೊಳ್ಳುವುದಕ್ಕೂ ಮೊದಲೇ ಅವಳಿಗೆ ಚೈನ್ ಕೊಡಿಸಿದೆ’ ಎಂದಿದ್ದರು.

‘ಅವಳ ಅಮ್ಮನಿಗೆ ನನಗೆ ಮಗು ದತ್ತು ಕೊಡುವಂತೆ ಕೇಳಿದೆ. ಇದನ್ನು ಕೇಳಿ ಅವರು ರಾಯಚೂರಿಗೆ ಹೋದರು. ಆದರೆ ಮಗುವಿಗೆ ನಾನಿಲ್ಲದೇ ಜ್ವರ ಬಂದಿತ್ತು.  ಫೋನ್ ಮೂಲಕ ಅವಳ ಜೊತೆ ಮಾತನಾಡಿದೆ. ದತ್ತು ತೆಗೆದುಕೊಳ್ಳುವುದಕ್ಕೆ ಅವಳ ಅಪ್ಪ-ಅಮ್ಮನ ಒಪ್ಪಿಗೆಯೂ ಇದೆ. ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿದೆ’ ಎಂದಿದ್ದರು. ಆದರೆ ಅವರು ಹೀಗೆ ಎಲ್ಲವನ್ನೂ ಹೇಳಿಕೊಂಡಿದ್ದನ್ನು ಗಮನಿಸಿದ ರಾಜ್ಯ ಮಕ್ಕಳ ರಕ್ಷಣಾ ಅಧಿಕಾರಿಗಳು ಇದು ಕಾನೂನು ಬಾಹಿರ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದರ ಸಂಬಂಧ ಈಗ ಸೋನು ಗೌಡರನ್ನು ಅರೆಸ್ಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಇದೊಂದು ದೈವಿಕ ಕ್ಷಣ': ಚಿರಂಜೀವಿ, ಎಂಎಂ ಕೀರವಾಣಿ ಜತೆಗಿನ ಫೋಟೋ ಹಂಚಿದ ನಟಿ ತ್ರಿಶಾ