Select Your Language

Notifications

webdunia
webdunia
webdunia
webdunia

'ಇದೊಂದು ದೈವಿಕ ಕ್ಷಣ': ಚಿರಂಜೀವಿ, ಎಂಎಂ ಕೀರವಾಣಿ ಜತೆಗಿನ ಫೋಟೋ ಹಂಚಿದ ನಟಿ ತ್ರಿಶಾ

Trisha

Sampriya

ಬೆಂಗಳೂರು , ಗುರುವಾರ, 21 ಮಾರ್ಚ್ 2024 (16:31 IST)
photo Courtesy Instagram
ಬೆಂಗಳೂರು: ತೆಲುಗಿನ ಖ್ಯಾತ ನಟಿ ತ್ರಿಶಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ನಟ ಚಿರಂಜೀವಿ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 

"ನಿಜಕ್ಕೂ ಇದೊಂದು ದೈವಿಕ ಮತ್ತು ಪೌರಾಣಿಕ ಮುಂಜಾನೆ' ಎಂದು ಅಡಿಬರಹವನ್ನು ಕೊಟ್ಟಿದ್ದಾರೆ.

ಫೋಟೋವನ್ನು  ಸ್ಟುಡಿಯೋದಲ್ಲಿ ತೆಗೆದಿರುವಂತೆ ತೋರುತ್ತಿದೆ. ಆದರೆ ನಟಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.

ತ್ರಿಶಾ ಹಾಗೂ ಚಿರಂಜೀವಿ ಮತ್ತೇ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಾಂಭರ ಚಿತ್ರದಲ್ಲಿ ಇವರು ನಟಿಸುತ್ತಿದ್ದು, ಸಿನಿಮಾ 2025ರಲ್ಲಿ ಬಿಡುಗಡೆಯಾಗಲಿದೆ.

2004 ರಲ್ಲಿ ಬಿಡುಗಡೆಯಾದ ತೆಲುಗಿನ ವರ್ಷಂ ಚಿತ್ರ ತ್ರಿಶಾಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತ್ತು. ಅದಲ್ಲದೆ ಹಿಟ್ ತೆಲುಗು ಪ್ರಾಜೆಕ್ಟ್‌ಗಳಾದ ನುವ್ವೋಸ್ತಾನಂಟೆ ನೆನೊಡ್ಡಂಟಾನಾ ಮತ್ತು ಅಥಾಡುಗಳಲ್ಲಿ ನಟಿಸಿದರು. 2015 ರಲ್ಲಿ, ಅವರು ಲಯನ್ ಮತ್ತು ಚೀಕಟಿ ರಾಜ್ಯಮ್‌ನಲ್ಲಿ ನಟಿಸಿದರು, 2016 ರಲ್ಲಿ ನಾಯಕಿ ಎಂಬ ದ್ವಿಭಾಷಾ ಚಲನಚಿತ್ರದಲ್ಲಿ ಕೆಲಸ ಮಾಡಿದರು. ಅಂದಿನಿಂದ ಅವರು ಮಲಯಾಳಂ ಚಿತ್ರ ಹೇ ಜೂಡ್ ಹೊರತುಪಡಿಸಿ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟರ ಮೇಲೆ ಅಂಧಾಭಿಮಾನವಿರಬಾರದು: ಕಿಚ್ಚನ ಬಗ್ಗೆ ಅಸಮಾಧಾನ ಹೊರಹಾಕಿದ ನಟಿ ಚಿತ್ರಾಲಿ ರಂಗಸ್ವಾಮಿ