Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿನ ತಂದೆಯಾದ 'ಸತ್ಯ' ಸೀರಿಯಲ್‌ನ ಸಾಗರ್‌ ಬಿಳಿಗೌಡ

Sagar Biligowda

Sampriya

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (14:36 IST)
photo Courtesy Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ಖ್ಯಾತಿಯ ಸಾಗರ್ ಬಿಳಿಗೌಡ ಹಾಗೂ ನಟಿ ಸಿರಿ ರಾಜು ದಂಪತಿಗೆ ಯುಗಾದಿ ಹಬ್ಬದಂದು ಹೆಣ್ಣು ಮಗುವಾಗಿದೆ.

ಇದೀಗ ಈ ಜೋಡಿ ಬದುಕಿಗೆ ಹೆಣ್ಣು ಮಗುವಿನ ಆಗಮನವಾಗಿದ್ದು, ಈ ಸಂತಸದ ವಿಚಾರವನ್ನು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿ ನಮಗೆ ಹೆಣ್ಣು ಮಗುವಾಗಿದೆ ಎಂದು ಹೇಳಿದ್ದರು.

ಜನವರಿ 2023ರಲ್ಲಿ ನಟಿ, ಮಾಡೆಲ್ ಆಗಿರುವ ಸಿರಿ ರಾಜು ಜತೆ ಸಾಗರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮ್ಯಾರೇಜ್‌ ಆನಿವರ್ಸರಿಗೆ ಕೆಲವೇ ದಿನಗಳಿರುವಾಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಈ ಕ್ಯೂಟ್‌ ಜೋಡಿ ಬೇಬಿ ಬಂಪ್ಸ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅದಲ್ಲದೆ ಸೀಮಂತವನ್ನು ಅದ್ಧೂರಿಯಾಗಿ ಮಾಡಿದ್ದರು. ಈ ಸಮಾರಂಭದಲ್ಲಿ ಕಿರುತೆರೆ ಕಲಾವಿದರು ಪಾಲ್ಗೊಂಡು ಹಾರೈಸಿದ್ದಿರು.


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮನೆ ಕಟ್ಟಿಸಿದ ನಟ ಅಜಯ್ ರಾವ್: ಗೃಹಪ್ರವೇಶಕ್ಕೆ ನಟ ಯಶ್ ಸೇರಿದಂತೆ ಸೆಲೆಬ್ರಿಟಿಗಳಿಗೆ ಆಹ್ವಾನ