Select Your Language

Notifications

webdunia
webdunia
webdunia
webdunia

ಸಿನಿಮಾಗಾಗಿ ಮಗಳ ಹೆಸರು ಬದಲಾಯಿಸಿದ ದುನಿಯಾ ವಿಜಯ್

ಸಿನಿಮಾಗಾಗಿ ಮಗಳ ಹೆಸರು ಬದಲಾಯಿಸಿದ ದುನಿಯಾ ವಿಜಯ್

Sampriya

ಬೆಂಗಳೂರು , ಗುರುವಾರ, 11 ಏಪ್ರಿಲ್ 2024 (20:13 IST)
photo Courtesy Instagram
ಬೆಂಗಳೂರು:  ದುನಿಯಾ ವಿಜಯ್ ಸಿನಿಮಾದ ಮೂಲಕವೇ ಪುತ್ರಿ ಮೋನಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದು ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಮಬಿನೇಷನ್ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಮಗಳ ಹೆಸರನ್ನು ರಿತಾನ್ಯಾ ವಿಜಯ್ ಎಂದು ಬದಲಿಯಿಸಿದ್ದಾರೆ.

ದುನಿಯಾ ವಿಜಯ್ 29ನೇ ಚಿತ್ರಕ್ಕೆ 'ಕಾಟೇರ' ಚಿತ್ರದ ಕಥೆಗಾರ ಜಡೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕನೇ ಮಗಳನ್ನು ದುನಿಯಾ ವಿಜಯ್ ಇಂಡಸ್ಟ್ರಿಗೆ ಪರಿಚಯ ಮಾಡಿಸುತ್ತಿದ್ದಾರೆ.

ಮೋನಿಕಾ ಬದಲು ರಿತಾನ್ಯಾ ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವೇನು ಎಂಬುದುನ್ನು ರಿತಾನ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ವರು, ನನ್ನ ಹೆಸರು ಮೋನಿಕಾ, ನನ್ನ ತಂಗಿ ಮೋನಿಷಾ ಎಲ್ಲರಿಗೂ ಒಂದು ಕನ್ಫೂಷನ್. ಅದರಿಂದ ಕೆಲವು ಬಾರಿ ನನ್ನ ವಿಡಿಯೋಗಳಿಗೆ ತಂಗಿಯ ಹೆಸರು ಹಾಕಿದ್ದು ಇದೆ. ಆ ಗೊಂದಲ ಬೇಡ ಅಂತ ನಾವು ರಿತಾನ್ಯಾ ಹೆಸರನ್ನು ಸೆಲೆಕ್ಟ್ ಮಾಡಿಕೊಂಡಿದ್ದೇವೆ ಎಂದು ವಿಜಯ್ ಪುತ್ರಿ ಮಾತನಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಗೆ ಮತ್ತೆ ಬಂದ ಕುಲವಧು ಧನ್ಯಾ: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಹೊಸ ಟ್ವಿಸ್ಟ್