Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು, ರಾಜಮೌಳಿ ಸಿನಿಮಾಗೆ ಈ ಬಾಲಿವುಡ್ ಹೀರೋ ವಿಲನ್

Mahesh Babu

Krishnaveni K

ಹೈದರಾಬಾದ್ , ಮಂಗಳವಾರ, 19 ಮಾರ್ಚ್ 2024 (15:13 IST)
ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶಿಸಲಿರುವ ಮಹೇಶ್ ಬಾಬು ನಾಯಕರಾಗಲಿರುವ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ಹೀರೋ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ನ ಈ ಸಿನಿಮಾ ಇನ್ನೂ ಚಾಲೂ ಆಗಿಲ್ಲ. ಆದರೆ ರಾಜಮೌಳಿ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವರ್ಷ ಶೂಟಿಂಗ್ ಆರಂಭವಾಗಲಿದೆ. ರಾಜಮೌಳಿ ಸಿನಿಮಾ ಎಂದರೆ ಜನರಲ್ಲಿ ನಿರೀಕ್ಷೆ ಸಹಜವಾಗಿಯೇ ಹೆಚ್ಚಿರುತ್ತದೆ.

ಈ ಸಿನಿಮಾ ದಟ್ಟ ಅರಣ್ಯದಲ್ಲಿ ನಡೆಯುವ ಸಾಹಸಮಯ ಸನ್ನಿವೇಶಗಳನ್ನು ಒಳಗೊಂಡಿರಲಿದೆ ಎಂದು ರಾಜಮೌಳಿ ಈಗಾಗಲೇ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಜಪಾನ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಮಹೇಶ್ ಬಾಬು ಈಗಾಗಲೇ ಜಪಾನ್ ಗೆ ತೆರಳಿ ತಯಾರಿಯನ್ನೂ ಮಾಡಿಕೊಂಡಿದ್ದಾರೆ.

ಇದೀಗ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಬಾಲಿವುಡ್ ಹೀರೋ ಹೃತಿಕ್ ರೋಷನ್ ಹೆಸರು ಕೇಳಿಬರುತ್ತಿದೆ. ಹೃತಿಕ್  ಈ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದು ನಿಜವೇ ಎಂದು ಚಿತ್ರತಂಡವೇ ಅಧಿಕೃತಗೊಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳಕ್ಕೆ ಶೂಟಿಂಗ್ ಗೆ ಬಂದ ದಳಪತಿ ವಿಜಯ್ ಕಾರು ಜಖಂ