Select Your Language

Notifications

webdunia
webdunia
webdunia
webdunia

ಅಭಿಮಾನಿಯ ಬಯಕೆ ಈಡೇರಿಸಿದ ಕಿಚ್ಚ ಸುದೀಪ್

ಅಭಿಮಾನಿಯ ಬಯಕೆ ಈಡೇರಿಸಿದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 20 ಫೆಬ್ರವರಿ 2019 (09:50 IST)
ಬೆಂಗಳೂರು: ವಿಶೇಷ ಚೇತನ ಬಾಲಕಿಯೊಬ್ಬಳು ಕಿಚ್ಚ ಸುದೀಪ್ ರನ್ನು ಭೇಟಿಯಾಗಬೇಕೆಂದು ಬಯಸುತ್ತಿರುವ ಸುದ್ದಿಯೊಂದನ್ನು ಮೊನ್ನೆಯಷ್ಟೇ ಓದಿರುತ್ತೀರಿ.


ಇದೀಗ ಕಿಚ್ಚ ಸುದೀಪ್ ಆ ಬಾಲಕಿಯ ಬಯಕೆ ನೆರವೇರಿಸಿದ್ದಾರೆ. ಆದರೆ ನೇರವಾಗಿ ಭೇಟಿ ಮಾಡಲು ಸಾಧ್ಯವಾಗದೇ ಇದ್ದರೂ ವಿಡಿಯೋ ಕಾಲ್ ಮೂಲಕ ತಮ್ಮ ಅಪ್ಪಟ ಅಭಿಮಾನಿ ಬಾಲಕಿ ಜತೆ ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಸಿನಿಮಾದ ಡೈಲಾಗ್ ಗಳು, ಹಾಡುಗಳನ್ನು ತಪ್ಪದೇ ಹೇಳುವ ಈ ಹುಡುಗಿಗೆ ಒಮ್ಮೆ ತನ್ನ ಆರಾಧ್ಯ ದೈವವನ್ನು ಭೇಟಿ ಮಾಡಲು ಅವಕಾಶ ಕೊಡಬೇಕು ಎಂದು ಟ್ವಿಟರ್ ನಲ್ಲಿ ವಿಡಿಯೋ ಮೂಲಕ ಮನವಿ ಮಾಡಲಾಗಿತ್ತು. ಈ ವಿಡಿಯೋ ಕಿಚ್ಚನನ್ನೂ ತಲುಪಿ, ಖಂಡಿತಾ ಆ ಹುಡುಗಿ ಎಲ್ಲಿದ್ದಾಳೆ ಹೇಳಿ, ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದರು.

ಆ ಭರವಸೆಯನ್ನು ಕಿಚ್ಚ ಇದೀಗ ಪೂರ್ತಿ ಮಾಡಿದ್ದು, ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವಿಚಾರವನ್ನು ಸ್ವತಃ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ಬಾಲಕಿಗೆ ಹರಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಅವತಾರದಲ್ಲಿ ಕಿರುತೆರೆಗೆ ಎಂಟ್ರಿ ಕೊಡಲಿರುವ ಭಾರತಿ ವಿಷ್ಣುವರ್ಧನ್