Select Your Language

Notifications

webdunia
webdunia
webdunia
webdunia

ಮಗುವಿನ ಹಾಡಿಗೆ ಕರಗಿತು ಕಿಚ್ಚ ಸುದೀಪ್ ಹೃದಯ

ಮಗುವಿನ ಹಾಡಿಗೆ ಕರಗಿತು ಕಿಚ್ಚ ಸುದೀಪ್ ಹೃದಯ
ಬೆಂಗಳೂರು , ಮಂಗಳವಾರ, 19 ಫೆಬ್ರವರಿ 2019 (09:40 IST)
ಬೆಂಗಳೂರು: ಕಿಚ್ಚ ಸುದೀಪ್ ಎಂದರೆ ದೇವರಂತೆ ಆರಾಧಿಸುವ ಅದೆಷ್ಟೋ ಅಭಿಮಾನಿಗಳು ನಮ್ಮ ನಡುವೆ ಇದ್ದಾರೆ. ತಮ್ಮನ್ನು ಇಷ್ಟಪಡುವ ಅಭಿಮಾನಿಗಳನ್ನು ಕಿಚ್ಚ ಸುದೀಪ್ ಕೂಡಾ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.


ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯಾಗಿರುವ ವಿಶೇಷ ಚೇತನ ಮಗುವೊಂದರ ಕರೆಗೆ ಅವರು ಓಗೊಟ್ಟಿದ್ದಾರೆ. ಕಿಚ್ಚನ ಅಪ್ಪಟ ಅಭಿಮಾನಿಯಾಗಿರುವ ಈ ಹೆಣ್ಣು ಮಗು ಅವರ ಸಿನಿಮಾ ಹಾಡಗಳನ್ನು, ಡೈಲಾಗ್ ಗಳನ್ನು ತಪ್ಪದೇ ಹೇಳುತ್ತದೆ.

ಈ ವಿಡಿಯೋವನ್ನು ಕಿಚ್ಚನಿಗೆ ಅಭಿಮಾನಿಗಳು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಸ್ವತಃ ಸುದೀಪ್ ಹೃದಯ ಕರಗಿದ್ದು, ಖಂಡಿತಾ ಈ ಮಗುವನ್ನು ಒಂದು ಸಾರಿ ಭೇಟಿಯಾಗುವೆ. ಈ ಮಗು ಎಲ್ಲಿದೆ ಎಂದು ತಿಳಿಸಿ ಎಂದು ಕೇಳಿದ್ದಾರೆ. ಕಿಚ್ಚನ ಹೃದಯವಂತಿಕೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ರನ್ನು ಮದುವೆಯಾಗಿ ಪ್ಲೀಸ್.. ಎಂದ ಅಭಿಮಾನಿಗೆ ಕತ್ರಿನಾ ಕೈಫ್ ಹೇಳಿದ್ದೇನು?!