Select Your Language

Notifications

webdunia
webdunia
webdunia
webdunia

ಶೂಟಿಂಗ್ ಗೂ ಮೊದಲೇ ಕಾಂತಾರ ಚಾಪ್ಟರ್ 1 ಕಡೆಯಿಂದ ದೊಡ್ಡ ಸುದ್ದಿ

Kantara chapter 1

Krishnaveni K

ಬೆಂಗಳೂರು , ಬುಧವಾರ, 20 ಮಾರ್ಚ್ 2024 (09:50 IST)
Photo Courtesy: Twitter
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ತಂಡದ ಕಡೆಯಿಂದ ಬಿಗ್ ಅಪ್ ಡೇಟ್ ಒಂದು ಸಿಕ್ಕಿದೆ.

ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಎರಡನೇ ಭಾಗದ ತಯಾರಿಯಲ್ಲಿ ತೊಡಗಿಸಿಕೊಂಡರು. ಕಾಂತಾರಗೆ ಸಿಕ್ಕ ಯಶಸ್ಸಿನ ನಂತರ ಹೊಂಬಾಳೆ ಫಿಲಂಸ್ ಕಾಂತಾರ ಚಾಪ್ಟರ್ 1 ರನ್ನು ಇನ್ನಷ್ಟು ಬೃಹದಾಗಿ ನಿರ್ಮಿಸಲು ಮುಂದಾಗಿದೆ. ಬರೋಬ್ಬರಿ 125 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿಬರುತ್ತಿದೆ.

ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಕಳೆದ ಡಿಸೆಂಬರ್ ನಲ್ಲಿಯೇ ನಡೆದಿತ್ತು. ಇದೀಗ ರಿಷಬ್ ಚಿತ್ರೀಕರಣದ ಮಾಹಿತಿ ಕೊಟ್ಟಿದ್ದಾರೆ. ಮುಂದಿನ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಈಗಾಗಲೇ ತಮ್ಮ ಊರಿನಲ್ಲಿ ಚಿತ್ರಕ್ಕೆ ಬೇಕಾದ ಸೆಟ್ ಗಳನ್ನು ಹಾಕಿಕೊಂಡಿದ್ದಾರಂತೆ.

ಆದರೆ ಚಿತ್ರ ಇನ್ನೂ ಶೂಟಿಂಗ್ ಆರಂಭಿಸುವ ಮುನ್ನವೇ ಪ್ರಮುಖ ಒಟಿಟಿ ಸಂಸ್ಥೆ ಅಮೆಝೋನ್ ಪ್ರೈಮ್ ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರಸಾರ ಹಕ್ಕನ್ನು ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ ಎಂಬ ಸುದ್ದಿ ಬಂದಿದೆ. ಕಾಂತಾರ ಮೊದಲ ಸಿನಿಮಾವೂ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಿತ್ತು. ಇದೀಗ ಎರಡನೇ ಸಿನಿಮಾವೂ ಇದೇ ಪ್ರೈಮ್ ವಿಡಿಯೋ ತೆಕ್ಕೆಗೆ ಬಂದಿದೆ. ಈ ಸಿಹಿ ಸುದ್ದಿಯನ್ನು ಸ್ವತಃ ರಿಷಬ್ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಟ್ಟೇರಿತು 'ತಪಸ್ಸಿ' ಸಿನಿಮಾ: ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ವಿ. ರವಿಚಂದ್ರನ್