Select Your Language

Notifications

webdunia
webdunia
webdunia
webdunia

ರಂಗನಾಯಕ ಸಿನಿಮಾಗೆ ನನ್ನದಲ್ಲ ಎಂದು ಅಚ್ಚರಿ ಮೂಡಿಸಿದ ಜಗ್ಗೇಶ್

Jaggesh

Krishnaveni K

ಬೆಂಗಳೂರು , ಸೋಮವಾರ, 18 ಮಾರ್ಚ್ 2024 (17:56 IST)
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ಜಗ್ಗೇಶ್ ನಾಯಕರಾಗಿರುವ ರಂಗನಾಯಕ ಸಿನಿಮಾ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಸಿನಿಮಾ ನನ್ನದಲ್ಲ ಎಂದಿದ್ದಾರೆ.

ತಮ್ಮ ಹುಟ್ಟುಹಬ್ಬದಂದು ಫೇಸ್ ಬುಕ್ ಲೈವ್ ಮಾಡಿದ್ದ ಜಗ್ಗೇಶ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಅವರು ರಂಗನಾಯಕ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಮೊನ್ನೆಯಷ್ಟೇ ಒಂದು ಸಿನಿಮಾ ಮಾಡಿದ್ದೆ. ಅದು ನಿಮಗೆ ಇಷ್ಟವಾಗಿಲ್ಲ. ಅದು ನನ್ನ ಸಿನಿಮಾವಲ್ಲ. ನಿರ್ದೇಶಕರ ಸಿನಿಮಾ ಎಂದಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ವರ್ತೂರು ಸಂತೋಷ್ ಬಗ್ಗೆ ಹೇಳಿದ ಮಾತಿಗೂ ಸ್ಪಷ್ಟನೆ ನೀಡಿದ್ದಾರೆ. ನಾನು ಹಳ್ಳಿ ಸೊಗಡಿನ ಮನುಷ್ಯ. ಕೆಲವೊಂದು ವಿಚಾರವನ್ನು ನೇರವಾಗಿ ಹೇಳಿಬಿಡುತ್ತೇನೆ ಎಂದು ವರ್ತೂರು ಸಂತೋಷ್ ಬಗ್ಗೆ ಹೇಳಿದ ಮಾತಿಗೆ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.

ನಾನು ಎಂದಿಗೂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲ್ಲ. ಒಂದು ವೇಳೆ ನನ್ನ ಮಾತಿನಿಂದ ಅಪ್ಪಿ ತಪ್ಪಿ ಯಾರಿಗಾದರೂ ಬೇಸರವಾದರೆ ಕ್ಷಮೆಯಿರಲಿ ಎಂದಿದ್ದಾರೆ.  ಈ ಮೂಲಕ ತಮ್ಮ ಇತ್ತೀಚೆಗಿನ ಎಲ್ಲಾ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆ ಆರೋಪ: ಬಿಗ್ಬಾಸ್‌ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅರೆಸ್ಟ್