Select Your Language

Notifications

webdunia
webdunia
webdunia
webdunia

ಹೊಸ ಗರ್ಲ್‌ಫ್ರೆಂಡ್ ಜತೆ ಟ್ರಿಪ್ ಎಂಜಾಯ್ ಮಾಡುತ್ತಿರುವ ನಾಗಚೈತನ್ಯ!

Shobitha Dhulipala

Sampriya

ಹೈದರಾಬಾದ್ , ಬುಧವಾರ, 24 ಏಪ್ರಿಲ್ 2024 (16:39 IST)
Photo Courtesy X
ಹೈದರಾಬಾದ್: ಮಾಜಿ ಪತ್ನಿ ಸಮಂತಾರಿಂದ ವಿಚ್ಛೇಧನ ಪಡೆದು ದೂರವಾದ ನಂತರ ನಟ ನಾಗಚೈತನ್ಯ ಹೆಸರು  ನಟಿ ಶೋಭಿತಾ ಧೂಳಿಪಾಲ ಜತೆ ತಳುಕು ಹಾಕಿಕೊಂಡಿದೆ.

ಇವರಿಬ್ಬರ ರಿಲೇಶನ್‌ ಶಿಫ್‌ ಬಗ್ಗೆ ಆಗಾಗ್ಗೆ ವದಂತಿಗಳು ಹರಿದಾಡುತ್ತಲೇ ಇರುತ್ತದೆ. ಎರಡು ದಿನಗಳ ಹಿಂದೆ, ಶೋಭಿತಾ ಧೂಳಿಪಾಲ ಅವರು ವನ್ಯಜೀವಿ ತಂಗುದಾಣದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಇನ್ನು ಭಾನುವಾರ ನಾಗಚೈತನ್ಯ ಕೂಡ ಹೊಸ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರ ಫೋಟೋಗಳನ್ನು ಹೋಲಿಕೆ ಮಾಡಿದ ಅಭಿಮಾನಿಗಳು , ಇಬ್ಬರೂ ಒಂದೇ ಸ್ಥಳದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಗೆಸ್ ಮಾಡಿದ್ದಾರೆ.

ಇದೀಗ ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳು ಹೊಸ ವದಂತಿಗೆ ಕಾರಣವಾಗಿದೆ.  ಇದುವರೆಗೆ ಇವರಿಬ್ಬರು ತಾವು ಪ್ರೀತಿಸುವುದರ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ.

ಬಾಕ್ಸ್ ಆಫೀಸ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ಗಳನ್ನು ಗಳಿಸಿದ ನಾಗ ಚೈತನ್ಯ, ಚಂದೂ ಮೊಂಡೇಟಿ ಬರೆದು ನಿರ್ದೇಶಿಸಿದ ತಮ್ಮ ಮುಂಬರುವ ಚಿತ್ರ 'ತಾಂಡೇಲ್' ನೊಂದಿಗೆ ಪುನರಾಗಮನ ಮಾಡಲು ಉತ್ಸುಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕಲಾದೇವರು ಹುಟ್ಟಿದ ದಿನ: 'ವರನಟ'ನ ಜತೆಗಿನ ಒಡನಾಟ ಹಂಚಿಕೊಂಡ ಜಗ್ಗೇಶ್