Select Your Language

Notifications

webdunia
webdunia
webdunia
webdunia

ಹೆಬ್ಬುಲಿ ನಟಿ ಅಮಲಾ ಪೌಲ್ ಸೀಮಂತ ಶಾಸ್ತ್ರ: ಶುಭಕೋರಿದ ಅಭಿಮಾನಿಗಳು

Amala Paul

Sampriya

ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2024 (17:28 IST)
photo Courtesy Instagram
ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕನ್ನಡ ಹೆಬ್ಬುಲಿ ಸಿನಿಮಾ ಖ್ಯಾತಿಯ ನಟಿ ಅಮಲಾ ಪೌಲ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಸಿಕೊಂಡಿದ್ದಾರೆ.

ಅದ್ಧೂರಿಯಾಗಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಪತಿ ಜತೆಗೆ ತೆಗೆದುಕೊಂಡಿರುವ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಜಗತ್ ದೇಸಾಯಿ ಅವರನ್ನು ಮದುವೆಯಾದ ಅಮಲಾ ಅವರು ಮದುವೆಯಾದ ಕೆಲ ತಿಂಗಳಲ್ಲೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು.

ಸೀಮಂತದಲ್ಲಿ ನಟಿ ಕೆಂಪು ಬಾರ್ಡ್‌ರ್‌ ಇರುವ ಬಿಳಿ ಬಣ್ಣದ ಸೀರೆಯುಟ್ಟು ಗಂಡನ ಜೊತೆ ಕುಳಿತು ಪೋಸ್ ನೀಡಿದ್ದಾರೆ. ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ಜಗತ್ ದೇಸಾಯಿ  ಬಿಳಿ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಲಾ ಕುಟುಂಬದಲ್ಲಿ ಸದ್ಯ ಸಂತಸ ಮನೆ ಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾಗೆ ಅಭಿಮಾನಿಗಳು ಇದೀಗ ಶುಭಹಾರೈಸುತ್ತಿದ್ದಾರೆ.

ಅಮಲಾ ಪೌಲಾಗೆ ಇದು 2ನೇ ಮದುವೆಯಾಗಿದ್ದು, ಈ ಹಿಂದೆ ಖ್ಯಾತ ನಿರ್ದೇಶಕ ವಿಜಯ್ ಜತೆಗೆ ಮದುವೆಯಾಗಿ ವಿಚ್ಛೇದನ ಪಡೆದುಕೊಂಡರು. ಹಲವು ವರ್ಷಗಳ ನಂತರ ಜಗತ್ ಜತೆ ಡೇಟಿಂಗ್ ಮಾಡಿ, ನಂತರ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ಕಾರಣ ಎಂದು ಕೆಟ್ಟ ಪೋಸ್ಟ್