Select Your Language

Notifications

webdunia
webdunia
webdunia
webdunia

ಕನ್ನಡದ ಸ್ಟಾರ್ ನಟರೊಬ್ಬರ ಜೊತೆ ತೆರೆ ಹಂಚಿಕೊಂಡ 'ಬ್ರಹ್ಮಗಂಟು' ಗುಂಡಮ್ಮ

ಕನ್ನಡದ ಸ್ಟಾರ್ ನಟರೊಬ್ಬರ ಜೊತೆ ತೆರೆ ಹಂಚಿಕೊಂಡ 'ಬ್ರಹ್ಮಗಂಟು' ಗುಂಡಮ್ಮ
ಬೆಂಗಳೂರು , ಗುರುವಾರ, 26 ಏಪ್ರಿಲ್ 2018 (06:24 IST)
ಬೆಂಗಳೂರು : ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  'ಬ್ರಹ್ಮಗಂಟು' ಧಾರಾವಾಹಿಯ ಮುಖ್ಯ ಪಾತ್ರಧಾರಿ ಗುಂಡಮ್ಮ 'ಗೀತಾ ಭಾರತಿ ಭಟ್’ ಅವರು ಇದೀಗ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ ಜೊತೆ ತೆರೆ ಹಂಚಿಕೊಂಡಿದ್ದಾರೆ.


ಹೌದು. ನಟಿ ಗೀತಾ ಅವರು ನಟ ಸುದೀಪ್ ಅವರೊಂದಿಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರು ನಾಯಕ ನಟನಾಗಿ ನಟಿಸುತ್ತಿರುವ " ಅಂಬಿ ನಿಂಗೆ ವಯಸ್ಸಾಯ್ತೋ" ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡುತ್ತಿರುವ ಶೃತಿ ಹರಿಹರನ್ ಅವರ ಗೆಳೆತಿಯ ಪಾತ್ರದಲ್ಲಿ ಗೀತಾ ನಟಿಸುತ್ತಿದ್ದಾರೆ.


'ಗುರುದತ್ ಗಾಣಿಗ' ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಆಗಿದೆ. ಪಾತ್ರ ವರ್ಗದಲ್ಲಿ ಸುದೀಪ್, ಶೃತಿ , ಸುಹಾಸಿನಿ ಸೇರಿದಂತೆ ಅನೇಕರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ ಕುಮಾರ್ ನಟಿಸುತ್ತಿರುವ ಕೇಸರಿ ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ