Select Your Language

Notifications

webdunia
webdunia
webdunia
webdunia

ಕರ್ನಾಟಕದ ಚುನಾವಣೆಯ ಸೋಲು ಗೆಲುವು ಇಡೀ ದೇಶದ ಭವಿಷ್ಯದ ದಿಕ್ಕನ್ನು ತೀರ್ಮಾನಿಸಲಿದೆ- ಜಿಗ್ನೇಶ್ ಮೆವಾನಿ

ಕರ್ನಾಟಕದ ಚುನಾವಣೆಯ ಸೋಲು ಗೆಲುವು ಇಡೀ ದೇಶದ ಭವಿಷ್ಯದ ದಿಕ್ಕನ್ನು ತೀರ್ಮಾನಿಸಲಿದೆ- ಜಿಗ್ನೇಶ್ ಮೆವಾನಿ
ಬೆಂಗಳೂರು , ಗುರುವಾರ, 26 ಏಪ್ರಿಲ್ 2018 (06:13 IST)
ಬೆಂಗಳೂರು : ‘ಬುದ್ಧ, ಬಸವ, ಅಂಬೇಡ್ಕರ್, ಸೂಫಿ ಸಂತರ ತತ್ವಗಳನ್ನು ಮನದಾಳಕ್ಕೆ ಇಳಿಸಿಕೊಂಡ ನಾಡಿನಲ್ಲಿ ದ್ವೇಷದ ವಿಷ ಬಿತ್ತುವ ಮತಾಂಧ ಶಕ್ತಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ’ ಎಂದು ದಲಿತ ನಾಯಕ, ಗುಜರಾತಿನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೆವಾನಿ ಅವರು ಹೇಳಿದ್ದಾರೆ.


ಬುಧವಾರ ನಗರದ ಕ್ವೀನ್ಸ್ ರಸ್ತೆಯ ದಾರುಸ್ಸಲಾಂ ಕಟ್ಟಡದಲ್ಲಿ ನಡೆದ ದಲಿತ-ಮುಸ್ಲಿಮ್-ಕ್ರೈಸ್ತ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ  ಅವರು,’ 2019ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಚುನಾವಣೆಯ ಸೋಲು ಗೆಲುವು ಇಡೀ ದೇಶದ ಭವಿಷ್ಯದ ದಿಕ್ಕನ್ನು ತೀರ್ಮಾನಿಸಲಿದೆ. ಈ ದೇಶ ಮತ್ತು ನಮ್ಮ ನಾಡು ಎತ್ತ ಮುಖ ಮಾಡಿದೆ, ಎತ್ತ ಸಾಗಲಿದೆ ಎಂಬ ಮುನ್ನೋಟದೊಂದಿಗೆ ನಾವು ಈ ಚುನಾವಣೆಗೆ ಸಕ್ರಿಯವಾಗಿ ಸ್ಪಂದಿಸಬೇಕಾಗಿದೆ. ಈಗಾಗಲೇ ದೇಶದಲ್ಲಿ ಹಣದ ಓಡಾಟ ನಿಂತು ಹೋಗಿದ್ದು, ವ್ಯಾಪಾರ ವಹಿವಾಟು ಕುಸಿದಿದೆ. ಧಾರ್ಮಿಕ ದ್ವೇಷ, ದುರ್ಬಲ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಸರಾಂ ಬಾಪು ವಿರುದ್ಧ ತೀರ್ಪು ಪ್ರಕಟ