Select Your Language

Notifications

webdunia
webdunia
webdunia
webdunia

ಬೈಕ್ ಅಪಘಾತ: ನಟಿ ಅರುಂಧತಿ ನಾಯರ್‌ಗೆ ಗಂಭೀರ ಗಾಯ

Actress Arundhati Nayar

Sampriya

ತಿರುವನಂತಪುರಂ , ಸೋಮವಾರ, 18 ಮಾರ್ಚ್ 2024 (20:09 IST)
Photo Courtesy Instagram
ತಿರುವನಂತಪುರಂ: ಬೈಕ್ ಅಪಘಾತದಲ್ಲಿ ಮಲೆಯಾಳಂ ನಟಿ ಅರುಂಧತಿ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿ ಅರುಂಧತಿ ನಾಯರ್ ನಟಿಸಿದ್ದಾರೆ.  ಅರುಂಧತಿ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾಳೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 
 
ಅಪಘಾತದಲ್ಲಿ ನಟಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಸಹೋದರಿ ಆರತಿ ನಾಯರ್​ ತಿಳಿಸಿದ್ದಾರೆ. ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಸಹಾಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
 
'ಮೂರು ದಿನಗಳ ಹಿಂದೆ ಸಹೋದರಿ ಅರುಂಧತಿ ನಾಐರ್​ ಅಪಘಾತಕ್ಕೀಡಾಗಿರೋದು ನಿಜ. ಆಕೆ ತೀವ್ರವಾಗಿ ಗಾಯಗೊಂಡಿದ್ದು, ವೆಂಟಿಲೇಟರ್​ನಲ್ಲಿ ಹೋರಾಡುತ್ತಿದ್ದಾರೆ' ಎಂದು ಆರತಿ ನಾಯರ್​ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಜನ್ಮಕ್ಕೆ ಅನ್ನದಾನ ಮಾಡಿದ ನಮ್ರತಾ ಗೌಡ: ಬಿಗ್ಬಾಸ್‌ ಸ್ಪರ್ಧಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ