Select Your Language

Notifications

webdunia
webdunia
webdunia
webdunia

ರಾಮ್ ಚರಣ್ ಮಗಳಿಗೆ ಚಿನ್ನದ ತೊಟ್ಟಿಲು ಗಿಫ್ಟ್ ಮಾಡಿದ ಅಂಬಾನಿ ದಂಪತಿ

chiru-upasana family
ಹೈದರಾಬಾದ್ , ಶನಿವಾರ, 1 ಜುಲೈ 2023 (18:03 IST)
ಹೈದರಾಬಾದ್: ರಾಮ್ ಚರಣ್ ತೇಜ ಮತ್ತು ಉಪಾಸನಾ ದಂಪತಿಯ ಮಗಳ ತೊಟ್ಟಿಲ ಶಾಸ್ತ್ರ ನಿನ್ನೆ ನೆರವೇರಿತ್ತು.

ರಾಮ್ ಚರಣ್ ದಂಪತಿಯ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಡಲಾಗಿತ್ತು. ಇದರ ಜೊತೆಗೆ ತೊಟ್ಟಿಲ ಶಾಸ್ತ್ರಕ್ಕೆ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ಸಿಕ್ಕ ಬಗ್ಗೆ ಸುದ್ದಿ ಬಂದಿತ್ತು.

ಈ ತೊಟ್ಟಿಲನ್ನು ಉಡುಗೊರೆಯಾಗಿ ಕೊಟ್ಟವರು ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದಂಪತಿ ಎಂದು ತಿಳಿದುಬಂದಿದೆ. ಮೆಗಾಸ್ಟಾರ್ ಕುಟುಂಬಕ್ಕೆ ಆಪ್ತರಾಗಿರುವ ಅಂಬಾನಿ ದಂಪತಿ ಮಗುವಿಗೆ 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರಲಿದೆ ನಾನು ಮತ್ತು ಗುಂಡ ಪಾರ್ಟ್ 2