Select Your Language

Notifications

webdunia
webdunia
webdunia
webdunia

ಈ ಜೇಡದ ವಿಷದಿಂದ ಹೆಚ್ಚಲಿದೆಯಂತೆ ಪುರಷನ ಲೈಂಗಿಕ ಶಕ್ತಿ

ಈ ಜೇಡದ ವಿಷದಿಂದ ಹೆಚ್ಚಲಿದೆಯಂತೆ ಪುರಷನ ಲೈಂಗಿಕ ಶಕ್ತಿ
ಬ್ರೆಜಿಲ್ , ಸೋಮವಾರ, 11 ಮಾರ್ಚ್ 2019 (06:41 IST)
ಬ್ರೆಜಿಲ್ : ಕೆಲವರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವೊಂದು ಆಹಾರ ಪದಾರ್ಥಗಳನ್ನು, ಟ್ಯಾಬ್ಲೆಟ್​ ಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ವಿಜ್ಞಾನಿಗಳು  ಮಾತ್ರ ಲೈಂಗಿಕ ಶಕ್ತಿ ವೃದ್ಧಿಸಿಕೊಳ್ಳುವವರಿಗಾಗಿ ಜೇಡದ ವಿಷದಿಂದ ಔಷಧವನ್ನು  ಕಂಡು ಹಿಡಿದ್ದಾರಂತೆ.


ಬ್ರೆಜಿಲ್​ನಲ್ಲಿರುವ ವಾಂಡರಿಂಗ್​ ಸ್ಪೈಡರ್​ ತುಂಬಾನೇ ವಿಷಕಾರಿ. ಇದು ಮಕ್ಕಳಿಗೆ ಕಚ್ಚಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆಯಂತೆ. ಆದರೆ ಇದರಿಂದ ಪುರಷನ ಲೈಂಗಿಕ ಶಕ್ತಿ ಹೆಚ್ಚಸಿಕೊಳ್ಳುವಂತಹ  ​ ಧನಾತ್ಮಕ ಅಂಶವೂ ಇದೆಯಂತೆ.


ಹೌದು. ಜೇಡದ ವಿಷದಿಂದ ಸಿದ್ಧಗೊಳ್ಳುವ ಜೆಲ್​ ಸಹಾಯದಿಂದ ಪುರಷನ ಲೈಂಗಿಕ ಶಕ್ತಿ ಹೆಚ್ಚಲಿದೆಯಂತೆ. ಈ ಜೇಡದಲ್ಲಿರುವ ನಂಜಿನ ಅಂಶ ಮನುಷ್ಯನ ದೇಹಕ್ಕೆ ಸೇರಿದರೆ ಶಿಶ್ನಕ್ಕೆ ಪೂರೈಕೆ ಆಗುವ ರಕ್ತದ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಇದರಿಂದ ಅವನ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲವಂತೆ. ಇದು ಪುರುಷ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಕೆ ಮಾಡುವ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ ಎಂಬುದು ವೈದ್ಯರ ಅಭಿಪ್ರಾಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ