Select Your Language

Notifications

webdunia
webdunia
webdunia
webdunia

ಪರ್ಷಿಯನ್ ಬೆಕ್ಕುಗಳನ್ನು ಕದ್ದ ಕಳ್ಳಿ ಅವುಗಳನ್ನು ಸಾಗಿಸಿದ್ದು ಹೇಗೆ ಗೊತ್ತಾ?

ಪರ್ಷಿಯನ್ ಬೆಕ್ಕುಗಳನ್ನು ಕದ್ದ ಕಳ್ಳಿ ಅವುಗಳನ್ನು ಸಾಗಿಸಿದ್ದು ಹೇಗೆ ಗೊತ್ತಾ?
ತೈವಾನ್ , ಗುರುವಾರ, 21 ಫೆಬ್ರವರಿ 2019 (06:21 IST)
ತೈವಾನ್ : ಎರಡು ಪರ್ಷಿಯನ್ ಬೆಕ್ಕುಗಳನ್ನು ಕದ್ದ ಕಳ್ಳಿಯೊಬ್ಬಳು ಅದನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಗರ್ಭಿಣಿಯಂತೆ ನಟಿಸಿ ಕದ್ದೊಯ್ದ ಘಟನೆ ತೈವಾನ್‍ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಚಾಂಗ್ ಚಿನ್ ಯಿ ಎಂಬಾಕೆ ಬೆಕ್ಕು ಸಾಕಣೆ ಮಾಡುತ್ತಿದ್ದು, ಈಕೆಯ ಬಳಿ 40 ಪರ್ಷಿಯನ್ ಬೆಕ್ಕುಗಳಿದ್ದು, ಪ್ರತಿಯೊಂದೂ 3,300 ಡಾಲರ್ ಬೆಲೆ ಬಾಳುತ್ತವೆ. ಆದರೆ ಯುವತಿಯೊಬ್ಬಳು ಬೆಕ್ಕಿನ ಮರಿಗಳ ಖರೀದಿಗೆಂದು ಈಕೆಯ ಮನೆಗೆ ಬಂದಿದ್ದು, ಇದ್ದಕ್ಕಿದ್ದಂತೆ 2 ಪರ್ಷಿಯನ್ ಬೆಕ್ಕುಗಳನ್ನು ಕದ್ದು ನಾಪತ್ತೆಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಚಾಂಗ್ ಪೊಲೀಸರಿಗೆ ದೂರು ನೀಡಿದ್ದಳು.

 

ಅಲ್ಲದೇ ಏರ್‍ಪೋರ್ಟ್‍ನಲ್ಲಿ ತಾನು ಸಿಕ್ಕಿ ಹಾಕಿಕೊಳ್ಳಬಾರದೆಂದು ಶೌಚಾಲಯಕ್ಕೆ ಕೈಚೀಲದೊಂದಿಗೆ ಹೋಗಿ ಬೆಕ್ಕಿನ ಮರಿಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಗರ್ಭಿಣಿಯಂತೆ ಉಬ್ಬಿದ ಹೊಟ್ಟೆಯೊಂದಿಗೆ ಹೊರಬಂದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಪೊಲೀಸರು ಈ ಆಧಾರದ ಮೇಲೆ ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಮಾಡಿದ ವಿಡಿಯೋ ತೋರಿಸಿ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಕಾಮುಕ