Select Your Language

Notifications

webdunia
webdunia
webdunia
webdunia

ಕಳೆದ ಐದು ವರ್ಷಗಳಲ್ಲಿ ಎಷ್ಟು ಕೆಜಿ ತಲೆಕೂದಲು ಪಾಕಿಸ್ತಾನದಿಂದ ಚೀನಾಕ್ಕೆ ರಫ್ತಾಗಿದೆ ಗೊತ್ತಾ?

ಕಳೆದ ಐದು ವರ್ಷಗಳಲ್ಲಿ ಎಷ್ಟು ಕೆಜಿ ತಲೆಕೂದಲು ಪಾಕಿಸ್ತಾನದಿಂದ ಚೀನಾಕ್ಕೆ ರಫ್ತಾಗಿದೆ ಗೊತ್ತಾ?
ಇಸ್ಲಾಮಾಬಾದ್ , ಸೋಮವಾರ, 21 ಜನವರಿ 2019 (11:32 IST)
ಇಸ್ಲಾಮಾಬಾದ್ : ಚೀನಾದಲ್ಲಿ ಸೌಂದರ್ಯ ಉದ್ಯಮದ ಬೆಳವಣಿಗೆ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಮಾನವ ಕೂದಲಿಗೆ ಬಾರೀ  ಬೇಡಿಕೆಯಿರುವುದರಿಂದ ಪಾಕಿಸ್ತಾನದಿಂದ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಕೆಜಿ ಮಾನವ ಕೂದಲನ್ನು ಚೀನಾಕ್ಕೆ ರಫ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ.


ಅಂದಾಜು ₹94 ಲಕ್ಷ (1,32,000 ಡಾಲರ್ ) ಮೌಲ್ಯದ 1,05,461 ಕೆಜಿ ತೂಕದಷ್ಟು ಮನುಷ್ಯರ ಕೂದಲು ಚೀನಾಗೆ ರಫ್ತು ಮಾಡಿರುವುದಾಗಿ ಪಾಕಿಸ್ತಾನದ ವಾಣಿಜ್ಯ ಮತ್ತು ಜವಳಿ ಸಚಿವಾಲಯ ಸಂಸತ್ತಿಗೆ ತಿಳಿಸಿರುವುದಾಗಿ ಪತ್ರಿಕೆವೊಂದರಲ್ಲಿ ವರದಿ ಮಾಡಲಾಗಿದೆ. ಹಾಗೇ ಪ್ರತೀ ಕೆ.ಜಿಗೆ 5 ರಿಂದ 6 ಸಾವಿರ ರೂಪಾಯಿಯಷ್ಟು ಬೆಲೆಯಿದೆ ಎಂದು ಪಾಕಿಸ್ತಾನದ ಪ್ರಮುಖ ಸೌಂದರ್ಯತಜ್ಞ ಎ.ಎಂ.ಚೌಹಾಣ್‌ ತಿಳಿಸಿದ್ದಾರೆ.


ಚೀನಾದಲ್ಲಿ ಮನುಷ್ಯರ ಕೂದಲಿಂದ ಸಿದ್ಧಪಡಿಸಿದ ವಿಗ್‌ ಗಳನ್ನು ಫ್ಯಾಷನ್‌ ಆಗಿ ಧರಿಸುತ್ತಿರುವುದು ಟ್ರೆಂಡ್‌ ಆಗಿದೆ. ಆದರೆ ಪಾಕಿಸ್ತಾನದಲ್ಲಿ ಫ್ಯಾಶನ್‌ ಗಾಗಿ ವಿಗ್‌ ಗಳನ್ನು ಧರಿಸುವ ಪ್ರವೃತ್ತಿಯಿಲ್ಲ ಹಾಗೂ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಯೂ ಕ್ಷೀಣಿಸಿದೆ. ಹಾಗಾಗಿ ಪಾಕಿಸ್ತಾನ ಚೀನಾಕ್ಕೆ ತಲೆಕೂದಲನ್ನು ರಫ್ತು ಮಾಡುತ್ತಿದೆ ಪತ್ರಿಕೆವೊಂದರಲ್ಲಿ ವರದಿ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ- ಡಾ.ಪರಮೇಶ್ವರ್