ವಾರ್ಷಿಕ ಟಾರ್ಗೆಟ್ ರೀಚ್ ಮಾಡದ ನೌಕರರಿಗೆ ಚೀನಾದ ಕಂಪೆನಿ ವಿಧಿಸಿದ ಶಿಕ್ಷೆ ಏನು ಗೊತ್ತಾ?

ಶನಿವಾರ, 19 ಜನವರಿ 2019 (06:58 IST)
ಚೀನಾ : ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯದಿದ್ದಾಗ ಅವರಿಗೆ ಅಂಬೆಗಾಲಲ್ಲಿ ನಡೆಸುವ ಶಿಕ್ಷೆ ನೀಡುವುದು ಸಾಮಾನ್ಯ. ಆದರೆ ಚೀನಾದ ಕಂಪೆನಿಯೊಂದು ತನ್ನ ನೌಕರರಿಗೆ ರಸ್ತೆಯಲ್ಲಿ ಅಂಬೆಗಾಲಿನಲ್ಲಿ ನಡೆಯುವ ಶಿಕ್ಷೆ ವಿಧಿಸಿದೆ.


ಹೌದು. ವಾರ್ಷಿಕ ಟಾರ್ಗೆಟ್ ರೀಚ್ ಮಾಡದ್ದಕ್ಕೆ ಕಂಪೆನಿಯು ತನ್ನ ಉದ್ಯೋಗಿಗಳನ್ನು ರಸ್ತೆಯ ಮೇಲೆ ಅಂಬೆಗಾಲಿನಲ್ಲಿ ನಡೆಸಿದ್ದಾರೆ. ಆ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಅಂಬೆಗಾಲಿಡುವುದನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ನೌಕರರ ಘನತೆಗೆ ಕುಂದು ತಂದಿರುವ ಈ ಕಂಪನಿಯನ್ನು ಮುಚ್ಚಬೇಕು' ಎಂದು ಹಲವರು ಕಿಡಿಕಾರಿದ್ದರೆ, ಇನ್ನೂ ಕೆಲವರು, ‘ಹಣದ ಮುಂದೆ ಆತ್ಮಾಭಿಮಾನವೂ ಮಣ್ಣಾಯಿತೇ' ಎಂದು ಪ್ರಶ್ನಿಸಿದ್ದಾರೆ. ವರದಿಗಳ ಪ್ರಕಾರ, ಈ ಘಟನೆಯ ನಂತರ ಆ ಕಂಪನಿಯು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING