Select Your Language

Notifications

webdunia
webdunia
webdunia
webdunia

ಇಂದು ವಿಶ್ವ ಕಿಡ್ನಿ ದಿನಾಚರಣೆ: ಹೆಚ್ಚುತ್ತಿದೆ ಬಿಸಿಲ ಧಗೆ, ಮೂತ್ರಪಿಂಡದ ಖಾಯಿಲೆಗಳ ಬಗ್ಗೆ ಇರಲಿ ಎಚ್ಚರ

Kidney

Sampriya

ಬೆಂಗಳೂರು , ಗುರುವಾರ, 14 ಮಾರ್ಚ್ 2024 (10:58 IST)
Photo Courtesy: Twitter
ಬೆಂಗಳೂರು: ಇಂದು ವಿಶ್ವದಾದ್ಯಂತರ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಜನತೆಗೆ  ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೀರ್ಘಕಾಲದಲ್ಲಿ ಕಾಣಿಸಿಕೊಳ್ಳುವ ಮೂತ್ರಪಿಂಡದ ರೋಗಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. 
 
ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡಗಳು ಒಂದಾಗಿದೆ. ಇವು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಮನುಷ್ಯನನ್ನು ಆರೋಗ್ಯಕರವಾಗಿರಿಸುತ್ತದೆ. ಅದಲ್ಲದೆ ಮೂತ್ರವನ್ನು ಉತ್ಪಾದಿಸಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹವು ಆರೋಗ್ಯಕರವಾಗಿರಬೇಕಾದರೆ ಕಿಡ್ನಿ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದು ದೇಹಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗಿ ಕಾಡುತ್ತದೆ. 
 
ಇನ್ನೂ ಬೇಸಿಗೆಯಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುವುದು ಸಾಮಾನ್ಯ. ಅದರಲ್ಲೂ ಮೂತ್ರಪಿಂಡದಲ್ಲಿ ಕಲ್ಲುಗಳು, ಮೂತ್ರದ ಸೋಂಕು, ಉರಿಮೂತ್ರ ಹಾಗೂ ತೀವ್ರವಾದ ಮೂತ್ರಪಿಂಡ ವೈಫಲ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.  ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಮ್ಮ ಮೂತ್ರಪಿಂಡಗಳನ್ನು ಕಾಪಾಡಿಕೊಳ್ಳಬಹುದು. ಇಲ್ಲಿದೆ ಕೆಲ ಟಿಪ್ಸ್‌ಗಳು. 
 
*ಉರಿ ಬಿಸಿಲಿನಲ್ಲಿ ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ. 
*ಹತ್ತಿಯ ಹಾಗೂ ಹಗುರವಾದ ಬಟ್ಟೆಗಳನ್ನು ಧರಿಸಿ
*ಅತೀ ಹೆಚ್ಚು ನೀರಿನ್ನು ಸೇವಿಸಿ
*ಕಲ್ಲಂಗಡಿ ಹಣ್ಣು, ಸೌತೆಕಾಯಿ ಹಾಗೂ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸುವುದು ಉತ್ತಮ.
*ಬೆಳಗ್ಗಿನ ಹೊತ್ತು ಒಂದು ಬಗೆಯ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ದೇಹವನ್ನು ಸಮತೋಲನದಲ್ಲಿ ಇರಿಸಬಹುದು.  
*ಚಿಪ್ಸ್‌, ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆ ಕಡಿಮೆ ಮಾಡಿ
*ಪ್ರಮುಖವಾಗಿ ಆಗಾಗ ನೀರು ಸೇವನೆ ಮಾಡುವುದರಿಂದ ಮೂತ್ರಪಿಂಡಕ್ಕೆ ಆಗುವ ಪ್ರಮುಖ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹಗಲು ಹೊತ್ತು ಎಷ್ಟು ಹೊತ್ತು ನಿದ್ರೆ ಮಾಡಿದರೆ ಉತ್ತಮ