Select Your Language

Notifications

webdunia
webdunia
webdunia
webdunia

ಊಟದ ನಂತರ ಸಿಹಿ ತಿಂದರೆ ದಪ್ಪಗಾಗುತ್ತೇವಾ ಅನುಮಾನವಿದ್ದರೆ ಇಲ್ಲಿ ನೋಡಿ

Sweets

Krishnaveni K

ಬೆಂಗಳೂರು , ಸೋಮವಾರ, 11 ಮಾರ್ಚ್ 2024 (11:42 IST)
Photo Courtesy: Twitter
ಬೆಂಗಳೂರು: ಹೆಚ್ಚಿನವರಿಗೆ ಊಟದ ಬಳಿಕ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಇದಕ್ಕಾಗಿ ಊಟದ ನಂತರ ಏನಾದರೂ ಸಿಹಿ ತಿನಿಸನ್ನು ತಿನ್ನುತ್ತಾರೆ. ಆದರೆ ಇದು ಆರೋಗ್ಯಕರ ಅಭ್ಯಾಸವೇ ಎಂದು ತಿಳಿದುಕೊಳ್ಳಿ.

ನಮ್ಮ ಭಾರತೀಯ ಸಂಪ್ರದಾಯದಂತೆ ಮದುವೆ ಮನೆಗಳಲ್ಲೂ ಊಟದ ಜೊತೆಗೆ ಸಿಹಿ ತಿನಿಸು ಇದ್ದೇ ಇರುತ್ತದೆ. ಆದರೆ ಊಟದ ನಡುವೆ ಅದನ್ನು ಸೇವಿಸಲು ಕೊಡುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕೆಲವೆಡೆ ಊಟವಾದ ನಂತರವೂ ಸಿಹಿ ತಿನಿಸು ನೀಡುತ್ತಾರೆ.

ಆದರೆ ಊಟದ ನಂತರ ಈ ರೀತಿ ಸಿಹಿ ತಿನ್ನುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಸಿಹಿ ತಿಂಡಿಯಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ. ಊಟದ ನಂತರ ಸಿಹಿ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಳವಾಗುತ್ತಾ ಹೋಗುತ್ತದೆ. ಜೊತೆಗೆ ಇನ್ಸುಲಿನ್ ಪ್ರಮಾಣವೂ ಹೆಚ್ಚುತ್ತದೆ. ಇದರಿಂದ ನಿಮ್ಮ ದೇಹ ತೂಕ ಹೆಚ್ಚಾಗುವುದು.

ಅಷ್ಟೇ ಅಲ್ಲ, ಮಧುಮೇಹ, ಜೀರ್ಣಕ್ರಿಯೆಗೂ ಸಮಸ್ಯೆಯಾಗಬಹುದು. ಊಟದ ನಂತರ ಸಿಹಿ ತಿನಿಸನ್ನು ಅತಿಯಾಗಿ ಸೇವಿಸುವುದರಿಂದ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಲ್ಲದೆ ರಾತ್ರಿ ಊಟದ ನಂತರ ಸೇವನೆ ಮಾಡುವುದರಿಂದ ನಿದ್ರೆಗೂ ತೊಂದರೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ದಪ್ಪಗಿದ್ದರೆ ಗರ್ಭಿಣಿಯಾಗಲು ತೊಂದರೆಯಾಗಬಹುದು