Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಮೀನು ತಿನ್ನುವುದು ಎಷ್ಟು ಸುರಕ್ಷಿತ

Pregnant

Krishnaveni K

ಬೆಂಗಳೂರು , ಸೋಮವಾರ, 26 ಫೆಬ್ರವರಿ 2024 (10:06 IST)
ಬೆಂಗಳೂರು: ಗರ್ಭಿಣಿಯಾಗಿದ್ದಾಗ ಅದು ತಿನ್ನಬೇಡ, ಇದು ತಿನ್ನಬೇಡ ಎಂದು ಒಂದಲ್ಲಾ ಒಂದು ಆಹಾರಕ್ಕೆ ಕಡಿವಾಣ ಹಾಕುತ್ತಲೇ ಇರುತ್ತಾರೆ. ಹಾಗಿದ್ದರೆ ಮಾಂಸಾಹಾರ ಪ್ರಿಯರು ಮೀನು ಸೇವಿಸಬಹುದಾ?

ಮೀನು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಆದರೆ ಗರ್ಭಿಣಿಯರು ಇದನ್ನು ಸೇವಿಸುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ನಿಮಗಿರಬಹುದು. ಮೀನಿನ ಖಾದ್ಯ ಮಾಡುವಾಗ ಸಾಕಷ್ಟು ಮಸಾಲ ಸೇರಿಸುತ್ತಾರೆ. ಹೀಗಾಗಿ ಮಗುವಿನ ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದಾ?

ಮಗು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗ ಅಮ್ಮಂದಿರು ಸಾಕಷ್ಟು ಪೌಷ್ಠಿಕ ಆಹಾರ ಸೇವಿಸಬೇಕಾಗುತ್ತದೆ. ಮೀನಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಗರ್ಭಿಣಿಯರು ತಿನ್ನಬಹುದು. ಆದರೂ ಅತಿಯಾದ ಮಸಾಲೆ ಸೇರಿಸಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಜೊತೆಗೆ ಎಲ್ಲಾ ಜಾತಿಯ ಮೀನುಗಳೂ ಗರ್ಭಿಣಿಯರಿಗೆ ಒಳ್ಳೆಯದಲ್ಲ.

ಮಗುವಿನ ಬೆಳವಣಿಗೆಗೆ ಎಲ್ಲಾ ರೀತಿಯ ಪೋಷಕಾಂಶಗಳು ಅಗತ್ಯ. ಅದನ್ನು ಮೀನಿನ ಆಹಾರದಿಂದ ಪಡೆಯಬಹುದು. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಇದು ಮಗುವಿನ ಬೆಳವಣಿಗೆಗೆ ಉತ್ತಮವಾಗಿದೆ. ಹೆಚ್ಚು ಮರ್ಕ್ಯುರಿ ಅಂಶವಿರುವ ಸಮುದ್ರದ ಮೀನುಗಳು ಅತ್ಯುತ್ತಮ. ಆದರೆ ಶಾರ್ಕ್, ಕತ್ತಿ ಮೀನು ಮುಂತಾದವುಗಳನ್ನು ಸೇವಿಸುವುದು ಬೇಡ. ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೆಯೇ ಮೀನು ಇಷ್ಟ, ಗರ್ಭಿಣಿಯರಿಗೆ ಒಳ್ಳೆಯದು ಎಂದೋ ಅತಿಯಾಗಿ ಸೇವಿಸುವುದೂ ಬೇಡ. ಎಲ್ಲವೂ ಹಿತಮಿತವಾಗಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯ ಬೊಜ್ಜು ಕರಗಿಸಲು ಈ ಯೋಗಾಸನ ಬೆಸ್ಟ್