Select Your Language

Notifications

webdunia
webdunia
webdunia
webdunia

ಮಕ್ಕಳು ಯಾವ ಹೊತ್ತಿನಲ್ಲಿ ಓದಿದರೆ ಉತ್ತಮ

Writing

Krishnaveni K

ಬೆಂಗಳೂರು , ಬುಧವಾರ, 21 ಫೆಬ್ರವರಿ 2024 (11:36 IST)
ಬೆಂಗಳೂರು: ಮಕ್ಕಳು ಎಷ್ಟು ಓದಿದರೂ ಮಾರ್ಕ್ಸ್ ಬರುತ್ತಿಲ್ಲ, ವಿದ್ಯೆ ತಲೆಗೆ ಹತ್ತಲ್ಲ ಎನ್ನುವವರು ಅವರು ಯಾವ ಹೊತ್ತಿನಲ್ಲಿ ಓದಿದರೆ ಉತ್ತಮ ಎಂಬುದನ್ನು ಗಮನಿಸಬೇಕು.

ಕೆಲವರು ಬೆಳಿಗ್ಗೆ ಬೇಗ ಎದ್ದು ಓದು, ಸರಸ್ವತಿ ಒಲಿಯುತ್ತಾಳೆ ಎಂದು ಸಲಹೆ ಕೊಡುತ್ತಾರೆ. ಕೆಲವರಿಗೆ ರಾತ್ರಿಯ ನಿಶ್ಯಬ್ಧದಲ್ಲಿ ಓದಲು ಇಷ್ಟವಾಗುತ್ತದೆ. ಆದರೆ ನಿಜವಾಗಿ ವಿದ್ಯೆ ತಲೆಗೆ ಹತ್ತಬೇಕಾದರೆ ಯಾವಾಗ ಓದಿದರೆ ಉತ್ತಮ ಎಂದು ತಿಳಿದುಕೊಂಡು ಓದುವುದು ಮುಖ್ಯ. ಮಕ್ಕಳು ಅಭ್ಯಾಸ ನಡೆಸುವ ಅವಧಿಯೂ ಅವರ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬೇಡಿ.

ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರ ಮನಸ್ಸು, ದೇಹ ಒಂದೊಂದು ಸಮಯಕ್ಕೆ ಒಗ್ಗಿಕೊಂಡಿರುತ್ತದೆ.  ಆದರೆ ಬಳಿಗ್ಗೆಯಿಂದ ಮಧ್ಯಾಹ್ನದ ತನಕದ ಅವಧಿಯಲ್ಲಿ ಏಕಾಗ್ರತೆ ಗರಿಷ್ಠವಾಗಿರುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ಸೂರ್ಯನ ಬೆಳಕು ಬೀಳುವ ಹೊತ್ತಾಗಿರುವುದರಿಂದ ಮನೋಭಾವವ ಉತ್ತಮವಾಗಿರುತ್ತದೆ.

ಅಪರಾಹ್ನದ ವೇಳೆಯಲ್ಲಿ ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಕೊಂಚ ಹೊತ್ತು ಮಕ್ಕಳನ್ನು ಆಟವಾಡಲು ಬಿಡಬೇಕು. ಆಗ ಮಕ್ಕಳು ಬರೆಯುವುದು, ಮನೆ ಕೆಲಸಗಳನ್ನು ಮಾಡುವುದರಲ್ಲಿ ಉತ್ಸಾಹ ತೋರುತ್ತಾರೆ. ರಾತ್ರಿ ಹೊತ್ತು ಮಿತವಾದ ಆಹಾರ ಸೇವಿಸುವುದರಿಂದ ನಮ್ಮ ಮೆದುಳೂ ಚುರುಕಾಗಿರುತ್ತದೆ.

ಬೆಳ್ಳಂ ಬೆಳಿಗ್ಗೆ ಓದುವುದು ಕೆಲವರಿಗೆ ಅಭ್ಯಾಸವಾಗಿರಬಹುದು. ಆದರೆ ನಿದ್ರೆಯ ಮಂಪರಿನಲ್ಲಿ ಈ ಹೊತ್ತು ಓದಲು ಎಲ್ಲರೂ ಇಷ್ಟಪಡುವುದಿಲ್ಲ. ಆಗ ಏಕಾಗ್ರತೆಯೂ ಉತ್ತಮ ಮಟ್ಟದಲ್ಲಿರುವುದಿಲ್ಲ. ಕಲಿಯುವಿಕೆ ಸಂಪೂರ್ಣವಾಗಿ ನಡೆಯಬೇಕಾದರೆ ದೇಹ ಮತ್ತು ಮನಸ್ಸು ಎರಡೂ ಸಹಕರಿಸಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ